ಉದಯವಾಹಿನಿ, ಬಿಗ್​​ಬಾಸ್ ಭಾರತದ ಬಲು ಜನಪ್ರಿಯ ರಿಯಾಲಿಟಿ ಶೋ. ಹಿಂದಿ, ತಮಿಳು, ತೆಲುಗು, ಕನ್ನಡ, ಮರಾಠಿ, ಮಲಯಾಳಂ ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಬಿಗ್​ಬಾಸ್ ಪ್ರಸಾರ ಆಗುತ್ತದೆ. ಪ್ರತಿ ಭಾಷೆಗೆ ಬೇರೆ ಬೇರೆ ನಿರೂಪಕರು ಆದರೆ ಮಾದರಿ ಮಾತ್ರ ಒಂದೇ. ಸ್ಪರ್ಧಿಗಳನ್ನು ಕೂಡಿ ಹಾಕುವ ಬಿಗ್​​ಬಾಸ್ ಮನೆಯಲ್ಲಿ ಐಶಾರಾಮಿಯಾಗಿ ಆಯೋಜಕರು ನಿರ್ಮಿಸಿರುತ್ತಾರೆ. ಮನೆ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ಸಹ ಖರ್ಚು ಮಾಡಲಾಗುತ್ತದೆ. ಆದರೆ ಇದೀಗ ಮಾಜಿ ಬಿಗ್​​ಬಾಸ್ ಸ್ಪರ್ಧಿಯೊಬ್ಬರು, ತಮಗೆ ಬಿಗ್​​ಬಾಸ್ ಇಂದಾಗಿ, ಅಲ್ಲಿ ಸ್ವಚ್ಛತೆ ಇಲ್ಲದೇ ಇರುವ ಕಾರಣಕ್ಕೆ ಚರ್ಮ ರೋಗ ಬಂದಿದೆ. ಇದರಿಂದಾಗಿ ತಮಗೆ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಬಿಗ್​​ಬಾಸ್​​ಗೆ ನೊಟೀಸ್ ಕಳಿಸಿದ್ದಾರೆ.

ಬಿಗ್​​ಬಾಸ್ ಮರಾಠಿಯಲ್ಲಿ ಭಾಗಿ ಆಗಿರುವ ಸ್ಪರ್ಧಿ ಸೊನಾಲಿ ರೌತ್ ಇದೀಗ ‘ಬಿಗ್ ಬಾಸ್ ಮರಾಠಿ 6’ಗೆ ನೊಟೀಸ್ ಕಳಿಸಿದ್ದಾರೆ. ಬಿಗ್​​ಬಾಸ್ ಮರಾಠಿ 6 ರಿಯಾಲಿಟಿ ಶೋ ಪ್ರಸ್ತುತ ಚಾಲ್ತಿಯಲ್ಲಿದ್ದು, ಇನ್ನೇನು ಅಂತಿಮ ಹಂತದಲ್ಲಿದೆ. ಇದೇ ಸೀಸನ್​​ನ ಸ್ಪರ್ಧಿ ಆಗಿದ್ದ ಸೋನಾಲಿ ರಾವತ್ ಹೊರಗೆ ಬಂದ ಬಳಿಕ ಬಿಗ್​ಬಾಸ್ ಮನೆಯೊಳಗಿನ ಪರಿಸ್ಥಿತಿಯ ಮಾಹಿತಿ ಹಂಚಿಕೊಂಡಿರುವುದು ಇದು ಆತಂಕಕ್ಕೆ ಕಾರಣವಾಗಿದೆ. ಕೇವಲ ಮನರಂಜನೆಗಾಗಿ ಸ್ಪರ್ಧಿಗಳ ಆರೋಗ್ಯದ ಜೊತೆ ಆಟವಾಡಲಾಗುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.ಬಿಗ್ ಬಾಸ್ ಮನೆಯಲ್ಲಿನ ಸ್ವಲ್ಪವೂ ಸ್ವಚ್ಛತೆ ಇಲ್ಲ. ಅನೈರ್ಮಲ್ಯದಿಂದಾಗಿ ತಮಗೆ ‘ಸ್ಕ್ಯಾಬೀಸ್’ ಎಂಬ ಚರ್ಮದ ಕಾಯಿಲೆ ಬಂದಿದೆ ಎಂದಿರುವ ಸೊನಾಲಿ ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ. ಸೊನಾಲಿ ಹಂಚಿಕೊಂಡಿರುವ ವಿಡಿಯೋನಲ್ಲಿ ಸೊನಾಲಿ ಅವರಿಗೆ ದೇಹದ ಹಲವು ಕಡೆ ಗುಳ್ಳೆಗಳು, ಗಾಯಗಳು ಆಗಿವೆ.

Leave a Reply

Your email address will not be published. Required fields are marked *

error: Content is protected !!