ಉದಯವಾಹಿನಿ, ಅಡಿವಿ ಶೇಷ್, ಮೃಣಾಲ್ ಠಾಕೂರ್ ಮತ್ತು ಅನುರಾಗ್ ಕಶ್ಯಪ್ ನಟನೆಯ ‘ಡಕೈತ್’ ಸಿನಿಮಾ ಕಳೆದ ವಾರ ಬಿಡುಗಡೆ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ 50 ಕೋಟಿ ಗಳಿಕೆಯನ್ನೂ ಸಹ ಮಾಡಿದೆ. ಇದೀಗ ‘ಡಕೈತ್’ ತಂಡ ಬೆಂಗಳೂರಿಗೆ ಬಂದಿದ್ದು, ‘ಡಕೈತ್’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವುದಕ್ಕೆ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಸಹ ಮಾಡಿದ್ದಾರೆ. ಅಡವಿಶೇಷ್, ಅನುರಾಗ್ ಕಶ್ಯಪ್ ಅವರುಗಳು ನಿನ್ನೆ ಬೆಂಗಳೂರಿಗೆ ಬಂದಿದ್ದು, ಬೆಂಗಳೂರಿನ ಜಿಟಿ ಮಾಲ್​​ಗೆ ಭೇಟಿ ನೀಡಿ ಸಿನಿಮಾ ನೋಡುತ್ತಿದ್ದವರೊಟ್ಟಿಗೆ ಮಾತನಾಡಿದರು. ಸಿನಿಮಾಕ್ಕೆ ಬೆಂಬಲಿಸುತ್ತಿರುವುದಕ್ಕೆ ಧನ್ಯವಾದ ಹೇಳಿದರು. ತಮ್ಮ ಪ್ರತಿ ಸಿನಿಮಾಗೂ ಕನ್ನಡಿಗರು ಸಪೋರ್ಟ್‌ ಮಾಡಿದ್ದು ತಾವು ಅಭಿನಯದ ಬಹುತೇಕ ಸಿನಿಮಾದ ಪ್ರಚಾರವನ್ನ ಬೆಂಗಳೂರಿನಲ್ಲಿ ಮಾಡಿರುವುದಾಗಿ ಅಡವಿ ಶೇಷ್‌ ಖುಷಿಯಿಂದ ಹೇಳಿಕೊಂಡರು. ನಟ, ನಿರ್ದೇಶಕ, ನಿರ್ಮಾಪಕ ಅನುರಾಗ್‌ ಕಶ್ಯಪ್‌ ಮಾತನಾಡಿ ‘ಈಗ ನಾನು ಬೆಂಗಳೂರಿನವನೇ..ನನ್ನನ್ನು ಸ್ವಾಗತ ಮಾಡುವ ಅವಶ್ಯಕತೆ ಇಲ್ಲ’ ಎಂದರು. ಸಿನಿಮಾ ನೋಡುತ್ತಿರುವುದಕ್ಕೆ ಪ್ರೇಕ್ಷಕರಿಗೆ ಧನ್ಯವಾದ ಸಹ ಅರ್ಪಿಸಿದರು. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ತಿಂಡಿ ಸವಿದು ಅಭಿಮಾನಿಗಳ ಜೊತೆ ಒಂದಿಷ್ಟು ಸಮಯ ಕಾಲ ಕಳೆದರು. ಅದಾದ ನಂತರ ಸುದ್ದಿಗೋಷ್ಟಿ ಮಾಡಿ ಮಾಧ್ಯಮದ ಮೂಲಕ ಸಿನಿಮಾ ನೋಡಿ ಸಪೋರ್ಟ್‌ ಮಾಡಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!