ಉದಯವಾಹಿನಿ, ಲಕ್ನೋ: ಅವಳಿ ಹೆಣ್ಣುಮಕ್ಕಳನ್ನು ತಂದೆಯೇ ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾನುವಾರ ಮುಂಜಾನೆ ನಡೆದಿದೆ.
48 ವರ್ಷದ ಮೆಡಿಕಲ್ ರೆಪ್ ಶಶಿ ರಂಜನ್ ಮಿಶ್ರಾ ತನ್ನ 11 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆ ಬಳಿಕ ಪೊಲೀಸರಿಗೆ ಕರೆ ಮಾಡಿ ಹೆಣ್ಣುಮಕ್ಕಳನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ಇಟಲಿಯಲ್ಲಿ ಇಬ್ಬರು ಭಾರತೀಯರಿಗೆ ಗುಂಡಿಕ್ಕಿ ಹತ್ಯೆ ಬಿಹಾರ ನಿವಾಸಿ ಶಶಿ ರಂಜನ್ ತನ್ನ ಪತ್ನಿ ರೇಷ್ಮಾ, ಅವಳಿ ಹೆಣ್ಣುಮಕ್ಕಳಾದ ರಿದ್ಧಿ ಮತ್ತು ಸಿದ್ಧಿ ಮತ್ತು ಆರು ವರ್ಷದ ಮಗನೊಂದಿಗೆ ವಾಸಿಸುತ್ತಿದ್ದ. ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಶಶಿ ರಂಜನ್ ಮಿಶ್ರಾ ಅನುಮಾನಿಸಿದ್ದ. ಆಕೆ ತನ್ನ ಮಗನೊಂದಿಗೆ ವಾಸಿಸಬೇಕು ಮತ್ತು ಹೆಣ್ಣುಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಆಗಾಗ್ಗೆ ಹೇಳುತ್ತಿದ್ದ.

ನನ್ನ ಪತಿ ಖಿನ್ನತೆಯಿಂದ ಬಳಲುತ್ತಿದ್ದಾನೆ, ಮನೆಯೊಳಗೆ ಹಲವಾರು ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿದ್ದಾನೆ. ಅಲ್ಲದೇ ನನ್ನನ್ನು ಹೆಣ್ಣುಮಕ್ಕಳಿದ್ದ ಕೋಣೆಗೆ ಹೋಗಲು ಬಿಡುತ್ತಿರಲಿಲ್ಲ ಎಂದು ಪತ್ನಿ ರೇಷ್ಮಾ ಆರೋಪಿಸಿದ್ದಾರೆ. ಶನಿವಾರ ರಾತ್ರಿ ಊಟ ಮಾಡಿದ ನಂತರ, ಪತಿ ಹೆಣ್ಣುಮಕ್ಕಳನ್ನು ಮಲಗಿಸಲು ಕರೆದೊಯ್ದಿದ್ದಾನೆ. ತಡರಾತ್ರಿ 2:30ರ ಸುಮಾರಿಗೆ ಒಬ್ಬ ಮಗಳನ್ನು ಶೌಚಾಲಯಕ್ಕೆ ಕರೆದೊಯ್ದ ನಂತರ ಇಬ್ಬರೂ ಕೋಣೆಗೆ ಹಿಂತಿರುಗಿದ್ದಾರೆ. ಬಳಿಕ ಲೈಟ್ ಆಫ್ ಮಾಡಲಾಯಿತು ಎಂದು ರೇಷ್ಮಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!