ಉದಯವಾಹಿನಿ, ಅಣಬೆ ಅಥವಾ ಮಶ್ರೂಮ್ ಅನ್ನೋದೇ ಬಹುತೇಕ ಎಲ್ಲರಿಗೂ ಇಷ್ಟವಾಗುತ್ತೆ. ಮಶ್ರೂಮ್‌ನಿಂದ ಬಿರಿಯಾನಿ, ಮಶ್ರೂಮ್ ಪುಲಾವ್‌, ಮಶ್ರೂಮ್ ಮಂಚೂರಿ ನಿಜಕ್ಕೂ ತಿನ್ನೋಕೆ ಸಕತ್‌ ಆಗಿರುತ್ತೆ. ಅದರಂತೆ ಇಂದು ಮಶ್ರೂಮ್ ಮಸಾಲಾ ಸುಲಭವಾಗಿ ಮಾಡಿ, ಸವಿಯಿರಿ. ಮತ್ತೆ ತಿನ್ನಬೇಕು ಅನಿಸುತ್ತದೆ.

ಅಗತ್ಯ ಪದಾರ್ಥಗಳು:
ಮಶ್ರೂಮ್
ಆಲೂಗಡ್ಡೆ
ಈರುಳ್ಳಿ
ಟೊಮೆಟೊ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಎಣ್ಣೆ
ಉಪ್ಪು
ಅರಿಶಿನ ಪುಡಿ
ಖಾರ ಪುಡಿ
ಗರಂ ಮಸಾಲಾ
ಧನಿಯಾ ಪುಡಿ
ಮೊಸರು
ಕಸೂರಿ ಮೇತಿ
ನೀರು
ಕೊತ್ತಂಬರಿ ಸೊಪ್ಪು
ಪಲಾವ್ ಎಲೆ
ಏಲಕ್ಕಿ
ದಾಲ್ಚಿನಿ
ಲವಂಗ
ಮಾಡುವ ವಿಧಾನ:
ಮೊದಲು ಮಶ್ರೂಮ್ ಮತ್ತು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಚಿಕ್ಕ ಪೀಸ್‌ಗಳಾಗಿ ಕತ್ತರಿಸಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿದ ನಂತರ ಮಶ್ರೂಮ್ ಸೇರಿಸಿ ಸ್ವಲ್ಪ ಉಪ್ಪು ಹಾಕಿ 10 ನಿಮಿಷ ಹುರಿಯಿರಿ. ಅದೇ ಸಮಯದಲ್ಲಿ ಬೇರೆ ಬಾಣಲೆಯಲ್ಲಿ ಆಲೂಗಡ್ಡೆಯನ್ನು ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ಹುರಿದ ಮಶ್ರೂಮ್ ಮತ್ತು ಆಲೂಗಡ್ಡೆಯನ್ನು ಬೇರೆ ಪ್ಲೇಟ್‌ನಲ್ಲಿ ತೆಗೆದು ಇಡಿ. ಮತ್ತೆ ಬಾಣಲೆಗೆ ಎಣ್ಣೆ ಹಾಕಿ, ಬಿಸಿ ಆದ ಮೇಲೆ ಪಲಾವ್ ಎಲೆ, ದಾಲ್ಚಿನ್ನಿ, ಏಲಕ್ಕಿ ಮತ್ತು ಲವಂಗ ಹಾಕಿ. ನಂತರ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಸೇರಿಸಿ ಹುರಿಯಿರಿ. ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ನಂತರ ಟೊಮೆಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ. ಇದಕ್ಕೆ ಉಪ್ಪು, ಧನಿಯಾ ಪುಡಿ, ಖಾರದ ಪುಡಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಕಲಸಿ. ಆನಂತರ ಮೊಸರು ಸೇರಿಸಿ ಮಿಶ್ರಣ ಮಾಡಿ, ನಂತರ ಹುರಿದ ಮಶ್ರೂಮ್ ಮತ್ತು ಆಲೂಗಡ್ಡೆಯನ್ನು ಸೇರಿಸಿ ಮತ್ತೆ ಸ್ವಲ್ಪ ಹುರಿಯಿರಿ. ನಂತರ ಒಂದು ಕಪ್ ನೀರು ಹಾಕಿ ಸುಮಾರು 10 ನಿಮಿಷ ಕುದಿಯಲು ಬಿಡಿ. ಕುದಿಯುವಾಗ ಕಸೂರಿ ಮೇತಿ ಮತ್ತು ಗರಂ ಮಸಾಲಾ ಸೇರಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇನ್ನೊಮ್ಮೆ ಮಿಕ್ಸ್ ಮಾಡಿ, ಸ್ವಲ್ಪ ಹೊತ್ತು ಚೆನ್ನಾಗಿ ಕುದಿಯಲು ಬಿಟ್ಟರೆ ಮಶ್ರೂಮ್ ಮಸಾಲಾ ರೆಡಿ.

Leave a Reply

Your email address will not be published. Required fields are marked *

error: Content is protected !!