ಉದಯವಾಹಿನಿ, ಐಪಿಎಲ್ 2026ರ 28ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡಕ್ಕೆ ಎಂದಿನಂತೆ ಇಬ್ಬರು ಯುವ ಸ್ಫೋಟಕ ಬ್ಯಾಟರ್ಗಳಾದ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಒದಗಿಸಿಕೊಟ್ಟರು. ಇವರಿಬ್ಬರು ಮೊದಲ ವಿಕೆಟ್ಗೆ 8.4 ಓವರ್ಗಳಲ್ಲಿ 81 ರನ್ಗಳ ಜೊತೆಯಾಟ ನೀಡಿದರು.
ಇಬ್ಬರಿಗೂ ಮುಕ್ತವಾಗಿ ಬ್ಯಾಟ್ ಬೀಸಲು ಕೆಕೆಆರ್ ಬೌಲರ್ಗಳು ಅವಕಾಶ ನೀಡದಿದ್ದರೂ, ಕಳಪೆ ಬೌಲಿಂಗ್ ಅನ್ನು ಸರಿಯಾಗಿ ದಂಡಿಸಿದರು. ಅದರಲ್ಲೂ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲೂ ಮತ್ತೊಂದು ಅರ್ಧಶತಕದತ್ತ ದಾಪುಗಾಲಿಡುತ್ತದ್ದರು. ಆದರೆ ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ವೈಭವ್ ರಮಣ್ದೀಪ್ಗೆ ಕ್ಯಾಚಿತ್ತು ಔಟಾದರು. ತಮ್ಮ ಇನ್ನಿಂಗ್ಸ್ನಲ್ಲಿ 28 ಎಸೆತಗಳನ್ನು ಎದುರಿಸಿದ ವೈಭವ್ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 46 ರನ್ ಬಾರಿಸಿ ಔಟಾದರು.
