ಉದಯವಾಹಿನಿ, ಐಪಿಎಲ್ ಅಖಾಡದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ, ಮೈದಾನದಲ್ಲಿ ನಡೆದ ಒಂದು ಕ್ಷಣ ಈಗ ಸಖತ್ ವೈರಲ್ ಆಗಿದೆ. ಪಂಜಾಬ್ ತಂಡದ ಮಾಲೀಕಿ, ಬಾಲಿವುಡ್ ನಟಿ ಪ್ರೀತಿ ಜಿಂಟಾ ತಮ್ಮ ತಂಡದ ವೇಗಿ ಅರ್ಷ್‌ದೀಪ್ ಸಿಂಗ್ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡು ಗೆಲುವಿನ ಶುಭಾಶಯ ಕೋರಿದ್ದಾರೆ. ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅರ್ಷ್‌ದೀಪ್ ಸಿಂಗ್, ಪ್ರೀತಿ ಜಿಂಟಾ ಅವರಿಂದ ಹಗ್ ಸಿಗುತ್ತಿದ್ದಂತೆ ಅತೀವ ಸಂತೋಷಗೊಂಡರು. ಅರ್ಶ್‌ದೀಪ್ ಅವರ ಮುಖದಲ್ಲಿದ್ದ ಆ ಸಮಾಧಾನ ಮತ್ತು ಸಂಭ್ರಮದ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೇ ವೇಳೆ ಈ ಫೋಟೋಗಳನ್ನು ಬಳಸಿಕೊಂಡು ನೆಟ್ಟಿಗರು ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಈ ಹಿಂದೆ ಶಮಿ ಅವರು ಪ್ರೀತಿ ಜಿಂಟಾ ಅವರಿಗೆ ಶುಭಾಶಯ ತಿಳಿಸುವಾಗ ಅಥವಾ ಭೇಟಿಯಾದಾಗ ನಡೆದ ಕೆಲವು ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿರುವ ಅಭಿಮಾನಿಗಳು, “ಅರ್ಷ್‌ದೀಪ್ ಸಿಂಗ್​​​ಗೆ ಅಪ್ಪುಗೆ ಸಿಕ್ಕಿದೆ, ಆದರೆ ಶಮಿ ಅವರು ಅಂತಹ ಒಂದು ಕ್ಷಣಕ್ಕಾಗಿ ಇನ್ನೂ ಕಾಯುತ್ತಿದ್ದಾರೆ” ಎಂದು ತಮಾಷೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!