ಉದಯವಾಹಿನಿ, ಮುಜಫರ್ ನಗರ : ಮಂಗವೊಂದು ಮೂರು ತಿಂಗಳ ಮಗುವನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಘಟನೆ ಮುಜಫರ್​ನಗರದ ಚರ್ತವಾಲ್ ಪಟ್ಟಣದಲ್ಲಿ ನಡೆದಿದೆ. ಆ ದೃಶ್ಯ ಇಡೀ ಊರನ್ನೇ ಬೆಚ್ಚಿಬೀಳಿಸಿತ್ತು. ಮೂರು ತಿಂಗಳ ಹಸುಗೂಸನ್ನು ತನ್ನ ಕೈಯಲ್ಲಿ ಹಿಡಿದುಕೊಂಡು, ಎರಡು ಗಂಟೆಗಳ ಕಾಲ ಇಡೀ ಊರನ್ನೇ ಆತಂಕದ ತುದಿಯಲ್ಲಿ ನಿಲ್ಲಿಸಿದ್ದ ಮಂಗನ ಕಥೆ ಈಗ ವೀಡಿಯೊ ಸಮೇತ ವೈರಲ್ ಆಗಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ, ಗುಲಿಸ್ತಾ ಅವರ ಮನೆಯಲ್ಲಿ ಮೂರು ತಿಂಗಳ ಮಗು ಹಾಸಿಗೆಯ ಮೇಲೆ ನೆಮ್ಮದಿಯಾಗಿ ನಿದ್ದೆ ಮಾಡುತ್ತಿತ್ತು. ಮನೆಯವರೆಲ್ಲಾ ಕೆಲಸದಲ್ಲಿ ನಿರತರಾಗಿದ್ದಾಗ, ಹೆಣ್ಣು ಮಂಗವೊಂದು ಛಾವಣಿಯ ಮೂಲಕ ಸದ್ದಿಲ್ಲದೆ ಮನೆಯೊಳಗೆ ನುಸುಳಿತ್ತು.

ತಾಯಿ ಗುಲಿಸ್ತಾ ಕೋಣೆಯೊಳಗೆ ಬಂದಾಗ ಕಂಡ ದೃಶ್ಯ ಅವರ ಎದೆ ನಡುಗುವಂತೆ ಮಾಡಿತ್ತು. ಮಗುವಿನ ಪಕ್ಕದಲ್ಲೇ ಕುಳಿತಿದ್ದ ಮಂಗವು ಕಂದಮ್ಮನನ್ನು ಮುಟ್ಟುತ್ತಾ, ಪ್ರೀತಿಯಿಂದ ಸವರುತ್ತಿತ್ತು. ತಾಯಿಯ ಕಿರುಚಾಟ ಕೇಳಿ ನೆರೆಹೊರೆಯವರು ಓಡಿಬಂದರು. ಜನರನ್ನು ನೋಡಿ ಕೆರಳಿದ ಮಂಗವು ಮಗುವನ್ನು ಬಿಡಲು ನಿರಾಕರಿಸಿದ್ದಲ್ಲದೆ, ಯಾರಾದರೂ ಹತ್ತಿರ ಬಂದರೆ ಆಕ್ರಮಣ ಮಾಡಲು ಶುರು ಮಾಡಿತು.

 

Leave a Reply

Your email address will not be published. Required fields are marked *

error: Content is protected !!