ಉದಯವಾಹಿನಿ, ಬೆಂಗಳೂರು: ಬೆಂಗಳೂರಿಗರ ನೆಚ್ಚಿನ ಸಾರಿಗೆ ಎಂದರೆ ಅದು ನಮ್ಮ ಬಿಎಂಟಿಸಿ. ಬಿಎಂಟಿಸಿಯಲ್ಲಿ ಈ ಹಿಂದೆ ಕಂಡೆಕ್ಟರ್‌ಗಳ ಯುಪಿಐ ಕಳ್ಳಾಟ ಬಯಲಾಗಿತ್ತು. ಇದೀಗ ಕಳ್ಳಾಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಡೈನಾಮಿಕ್ ಕ್ಯೂಆರ್ ಕೋಡ್ ಆಧಾರಿತ ಹೊಸ ಇಟಿಎಂ ಮಿಷನ್‌ಗಳನ್ನು ಇಲಾಖೆ ಪರಿಚಯಿಸುತ್ತಿದೆ. ಮುಂದಿನ ತಿಂಗಳಾಂತ್ಯಕ್ಕೆ ಎಲ್ಲಾ ಬಸ್‌ಗಳಲ್ಲಿಯೂ ಈ ಹೊಸ ಇಟಿಎಂಗಳು ಲಭ್ಯವಾಗಲಿವೆ.
ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಕಂಡೆಕ್ಟರ್‌ಗಳ ಕರಾಮತ್ತು ಹೆಚ್ಚಾಗಿದೆ. ತಮ್ಮ ಸ್ವಂತ ಯುಪಿಐ ಸ್ಕ್ಯಾನರ್ ನೀಡಿ ಜನರ ಟಿಕೆಟ್ ಹಣ ವಂಚಿಸಿದ್ದು ಬಟಾಬಯಲಾಗಿದೆ. ಇಂತಹ ಫೇಕ್ ಟಿಕೆಟ್ ಮನಿ ಟ್ರಾನ್ಸ್ಫರ್‌ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಿಎಂಟಿಸಿ ಮಹತ್ವದ ಹೆಜ್ಜೆ ಇಟ್ಟಿದೆ. ಸುಮಾರು 11 ಸಾವಿರ ಅತ್ಯಾಧುನಿಕ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳನ್ನು ಅಳವಡಿಸಲು ಮುಂದಾಗಿದೆ.
