ಉದಯವಾಹಿನಿ, ಅಮರಾವತಿ (ಆಂಧ್ರ ಪ್ರದೇಶ): ಆಂಧ್ರದ ಹಲವು ಜಿಲ್ಲೆಗಳಲ್ಲಿ ಶನಿವಾರ ಡೀಸೆಲ್ ಮತ್ತು ಪೆಟ್ರೋಲ್ ಅಭಾವ ತೀವ್ರವಾಗಿತ್ತು. ಪ್ರತೀ ಜಿಲ್ಲೆಯ ಡಜನ್‌ಗಟ್ಟಲೆ ಬಂಕ್‌ಗಳಲ್ಲಿ ದಾಸ್ತಾನಿಲ್ಲ ಎಂಬುದನ್ನು ಸೂಚಿಸುವ ‘ನೋ ಸ್ಟಾಕ್’ ಬೋರ್ಡ್‌ಗಳನ್ನು ಹಾಕಲಾಗಿತ್ತು.
ಎಲ್ಲೆಡೆ ಪೆಟ್ರೋಲ್‌ಗಿಂತಲೂ ಡೀಸೆಲ್ ಕೊರತೆಯೇ ಹೆಚ್ಚಾಗಿತ್ತು. ಇದರಿಂದಾಗಿ ವಾಹನ ಚಾಲಕರು ಮತ್ತು ರೈತರು ಭಾರೀ ತೊಂದರೆ ಎದುರಿಸುತ್ತಿದ್ದಾರೆ. ಶುಕ್ರವಾರ ರಾತ್ರಿ ಶುರುವಾದ ಸಮಸ್ಯೆ ನಿನ್ನೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಹೆಚ್ಚಿನ ಸಂಖ್ಯೆಯ ವಾಹನ ಚಾಲಕರು ಅಗತ್ಯಕ್ಕಿಂತ ಹೆಚ್ಚು ಖರೀದಿಸುತ್ತಿರುವುದರಿಂದ ದಾಸ್ತಾನು ಬೇಗ ಖಾಲಿಯಾಗುತ್ತಿವೆ ಎಂದು ಬಂಕ್ ಮಾಲೀಕರು ಹೇಳುತ್ತಿದ್ದಾರೆ. ಇದರಿಂದಾಗಿ, ಸೀಮಿತ ಪ್ರಮಾಣದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಸರಬರಾಜು ಮಾಡಲಾಗುತ್ತಿದೆ.

ಪರಿಸ್ಥಿತಿಯ ಪರಿಶೀಲನೆ ನಡೆಸಿದ ಸಿಎಂ ನಾಯ್ಡು: ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶನಿವಾರ ಅಧಿಕಾರಿಗಳೊಂದಿಗೆ ಇಂಧನ ಕೊರತೆ, ವಾಹನ ಚಾಲಕರು ಮತ್ತು ರೈತರ ಸಮಸ್ಯೆಗಳ ಪರಿಶೀಲನೆ ನಡೆಸಿದ್ದಾರೆ. ಸಮಸ್ಯೆಯನ್ನು ಪರಿಹರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ತಕ್ಷಣ ಸೂಕ್ತವೆನಿಸುವ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!