ಉದಯವಾಹಿನಿ,ಬಾಲಿವುಡ್‌ನ ಕಾಮಿಡಿ-ಹಾರರ್ ಜಾನರ್‌ನಲ್ಲಿ ಪ್ರೇಕ್ಷಕರನ್ನು ಮತ್ತೆ ರಂಜಿಸಿರುವ ಅಕ್ಷಯ್ ಕುಮಾರ್ ಹಾಗೂ ನಿರ್ದೇಶಕ ಪ್ರಿಯದರ್ಶನ್ ಕಾಂಬಿನೇಷನ್ ‘ಭೂತ್ ಬಂಗ್ಲ’ ಸಿನಿಮಾ 9 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದೆ.
ಬಿಡುಗಡೆಯಾದ 9ನೇ ದಿನವಾದ ಶನಿವಾರ ಚಿತ್ರ 10.75 ಕೋಟಿ ರೂ. ಗಳಿಸಿದ್ದು ಮೊದಲ ವಾರದಲ್ಲಿ 84.40 ಕೋಟಿ ರೂ. ಸಂಗ್ರಹಿಸಿತ್ತು. ಇದರೊಂದಿಗೆ ಭಾರತದ ಒಟ್ಟು ಕಲೆಕ್ಷನ್ 100.90 ಕೋಟಿ ರೂ. ತಲುಪಿದೆ. ವಿದೇಶಗಳಲ್ಲಿ ಸಹ ಉತ್ತಮ ಪ್ರದರ್ಶನ ಕಂಡು, ಒಟ್ಟಾರೆ ವಿಶ್ವವ್ಯಾಪಿ ಗಳಿಕೆ 135 ಕೋಟಿ ರೂ. ಮೀರಿದೆ.
