ಉದಯವಾಹಿನಿ, ಮಹಾರಾಷ್ಟ್ರದಲ್ಲಿ ಮಾವು ಮತ್ತು ಸಂಬಂಧಿತ ಉತ್ಪನ್ನಗಳಿಗೆ ಬೇಡಿಕೆ ಏರುತ್ತಿದ್ದಂತೆ, ಪುಣೆಯಲ್ಲಿ ಆಹಾರ ಸುರಕ್ಷತೆ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಆಹಾರ ಕಲಬೆರಕೆಯ ಪ್ರಕರಣವನ್ನು ಬಹಿರಂಗಪಡಿಸಿದ್ದಾರೆ. ಆಹಾರ ಮತ್ತು ಔಷಧ ಆಡಳಿತವು (ಎಫ್ಟಿಎ) 3,800 ಕೆಜಿಯಷ್ಟು ಕಲಬೆರಕೆಯಾಗಿರುವ ‘ಮ್ಯಾಂಗೋ ಪಲ್ಸ್ (ಮಾವಿನ ತಿರುಳು) ಅನ್ನು ಜಪ್ತಿ ಮಾಡಿದ ಅನಧಿಕೃತ ಆಹಾರ ಬಣ್ಣಗಳು ಮತ್ತು ಇತರ ಕಲಬೆರಕೆಗಳನ್ನು ಬಳಸಿ ತಯಾರಿಸಲಾಗುತ್ತಿದ್ದ ಪೂರೈಕೆ ಸರಪಳಿಯೊಂದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಎಫ್ಟಿಎ ಪ್ರಕಾರ ವ್ಯಾಪಕ ಪ್ರಮಾಣದಲ್ಲಿ ಕಲಬೆರಕೆ ಮಾವಿನ ತಿರುಳನ್ನು ಉತ್ಪಾದಿಸುವ ಅಕ್ರಮ ಕಾರ್ಯಾಚರಣೆಯ ಗೌಪ್ಯ ಮಾಹಿತಿ ದೊರೆತ ನಂತರ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಎಫ್ಟಿಎ ತಂಡವು ಮೊದಲು ಮಾವಲ್ ತಾಲೂಕಿನ ಉರ್ಸೆ ಗ್ರಾಮದಲ್ಲಿರುವ ಉತ್ಪಾದನಾ ಘಟಕದ ಮೇಲೆ ದಾಳಿ ಮಾಡಿದೆ. ವರದಿಗಳ ಪ್ರಕಾರ ಅಕ್ರಮ್ ಗುಲಾಮ್ ಎಂದೂ ಕರೆಯಲಾಗುತ್ತಿದ್ದ ಮೊಹಮ್ಮದ್ ಎಕ್ರಮುಲ್ ಇದನ್ನು ನಿರ್ವಹಿಸುತ್ತಿದ್ದ ಎಂದು ವರದಿಯಾಗಿದೆ.
ತಪಾಸಣೆ ಸಮಯದಲ್ಲಿ ಅನಧಿಕೃತ ಆಹಾರ ಬಣ್ಣಗಳು ಮತ್ತು ಆಹಾರ ಸುರಕ್ಷತೆ ನಿಯಮಗಳಡಿ ಅನುಮತಿಸದ ಇತರ ವಸ್ತುಗಳನ್ನು ಬಳಸಿ ಮಾವಿನ ತಿರುಳನ್ನು ತಯಾರಿಸಲಾಗುತ್ತಿರುವುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ತಂಡವು ಆರು ಮಾದರಿಗಳನ್ನು ಪ್ರಯೋಗಾಲಯದ ಪರೀಕ್ಷೆಗಾಗಿ ಸಂಗ್ರಹಿಸಿಕೊಂಡಿದೆ. ಮಾವಿನ ತಿರುಳು, ಹಸಿ ಮಾವು ಮತ್ತು ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಸುವ ಸೇರ್ಪಡೆಗಳಾದ ಸಕ್ಕರೆ, ಹಸುವಿನ ಹಾಲು ಮತ್ತು ದ್ರವ ಕೇಸರಿ ಬಣ್ಣದ ದ್ರಾವಣ ಸೇರಿವೆ. ದಾಸ್ತಾನು ಬೇಗನೇ ಹಾಳಾಗುವ ಕಾರಣ ಎಫ್ಟಿಎ ಅಧಿಕಾರಿಗಳು 3,282.9 ಕೆಜಿ ಮಾವಿನ ತಿರುಳನ್ನು ವಶಪಡಿಸಿ ಸ್ಥಳದಲ್ಲೇ ನಾಶಪಡಿಸಿದ್ದಾರೆ. ಸುಮಾರು 1.61 ಲಕ್ಷ ರೂ.ಗಳಷ್ಟು ಮೌಲ್ಯದ ಸರಕನ್ನು ನಾಶಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!