ಉದಯವಾಹಿನಿ, ಸಾಮಾನ್ಯವಾಗಿ ಪ್ರಾಣಿಜನ್ಯ ಪ್ರೊಟೀನ್ ಹೋಲಿಸಿದರೆ ಸಸ್ಯಜನ್ಯ ಪ್ರೊಟೀನ್ ಅನ್ನು ಕೀಳಂದಾಜು ಮಾಡಲಾಗುತ್ತದೆ. ಆದರೆ ಈ ಭಾವನೆ ನಿಧಾನವಾಗಿ ಬದಲಾಗುತ್ತಿದೆ. ನಿರ್ದಿಷ್ಟ ಸಸ್ಯಜನ್ಯ ಆಹಾರಗಳು ಅತ್ಯುತ್ತಮ ಪ್ರಮಾಣದ ಪ್ರೊಟೀನ್ ಅನ್ನು ಒದಗಿಸುತ್ತವೆ. ಅಲ್ಲದೆ, ಹೆಚ್ಚುವರಿ ಪೋಷಕಾಂಶದ ಲಾಭಗಳನ್ನೂ ತರುತ್ತವೆ.
ಬಹುತೇಕ ಪ್ರಾಣಿಜನ್ಯ ಪ್ರೊಟೀನ್ಗಳು ಸ್ಯಾಚುರೇಟೆಡ್ ಕೊಬ್ಬುಗಳ ಜೊತೆಗೆ ಬರುತ್ತವೆ. ಆದರೆ ಸಸ್ಯ ಪ್ರೊಟೀನ್ಗಳ ಜೊತೆಗೆ ಫೈಬ‌ರ್, ಆಂಟಿ ಆಕ್ಸಿಡಂಟ್ಗಳು ಮತ್ತು ಕರುಳಿ ಸ್ನೇಹಿ ಸಂಯುಕ್ತಗಳನ್ನು ಹೊಂದಿವೆ. ಹೀಗಾಗಿ ಸಸ್ಯಜನ್ಯ ಪ್ರೊಟೀನ್ಗಳು ಆಹಾರಕ್ಕೆ ಹೆಚ್ಚು ಸಮತೋಲಿತ ಮತ್ತು ಸಂಪೂರ್ಣ ಸೇರ್ಪಡೆಯಾಗಿರುತ್ತವೆ. ಇಂತಹ ಶಕ್ತಿಯುತ ಪ್ರೊಟೀನ್ ಬೇಕೆಂದರೆ ನೀವು ಸಸ್ಯಪ್ರೊಟೀನ್ ಅನ್ನು ನೋಡುವ ರೀತಿಯೇ ಬದಲಾಗಲಿದೆ.

ಯುನೈಟೆಡ್ ಕಿಂಗ್ಲಂ ಮೂಲದ ಸರ್ಜನ್ ಡಾ ಕರಣ್ ರಾಜನ್ ಅವರು ಎಪ್ರಿಲ್ 16ರಂದು ಇನ್ನಾಗ್ರಾಂನಲ್ಲಿ ಹಾಕಿರುವ ವೀಡಿಯೋದಲ್ಲಿ ಸಸ್ಯ ಪ್ರೊಟೀನ್ ಬಗ್ಗೆ ವಿವರಿಸಿದ್ದಾರೆ. “ಎಡಮೇಮ್ ಅಥವಾ ಸಿಲ್ಕ್ ಅವರೆ ಅಧಿಕ ಪ್ರೊಟೀನ್ ಜೊತೆಗೆ ಅಧಿಕ ಫೈಬ‌ರ್ ಅಂಶಗಳನ್ನೂ ಹೊಂದಿದೆ. ಒಂದು ಕಪ್ ಸಿಲ್ಕ್ ಅವರೆ 18 ಗ್ರಾಂಗಳಷ್ಟು ಪ್ರೊಟೀನ್ ಮತ್ತು ಎಂಟು ಗ್ರಾಂಗಳಷ್ಟು ಫೈಬ‌ರ್ ಹೊಂದಿವೆ. ಆದರೆ 190 ಕ್ಯಾಲರಿಗಳಷ್ಟೇ ಇವೆ. ಸಿಲ್ಕ್ ಅವರೆಯಲ್ಲಿರುವ ಶಕ್ತಿಗಳ ಸಂಖ್ಯೆಯಷ್ಟೇ ಮುಖ್ಯವಲ್ಲ. ಅವುಗಳ ಒಳಗೆ ಯಾವ ವಿಧದ ಫೈಬರ್ಗಳು, ಯಾವ ವಿಧದ ಪ್ರೊಟೀನ್ಗಳು ಮತ್ತು ಬಯೋ ಆ್ಯಕ್ಟಿವ್ ಸಂಯುಕ್ತಗಳು ಇವೆ ಎನ್ನುವುದು ಮುಖ್ಯವಾಗುತ್ತದೆ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!