ಉದಯವಾಹಿನಿ , ಕೋಲ್ಕತ್ತಾ: ಇವಿಎಂ ಯಂತ್ರಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮ್‌ಗಳನ್ನು ಅಕ್ರಮವಾಗಿ ತೆರೆಯಲಾಗಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಡರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ತಾವು ಸ್ಪರ್ಧಿಸಿರುವ ಭವಾನಿಪುರ ಕ್ಷೇತ್ರದ ಮತ ಎಣಿಕಾ ಕೇಂದ್ರವಾದ ಸಖಾವತ್ ಮೆಮೋರಿಯಲ್ ಸ್ಕೂಲ್ ಬಳಿ ಮಮತಾ ಬ್ಯಾನರ್ಜಿ ಅವರು ಸ್ವತಃ ಭೇಟಿ ನೀಡಿ ಸುಮಾರು ನಾಲ್ಕು ಗಂಟೆಗಳ ಕಾಲ ತಂಗಿದ್ದರು.ಇವಿಎಂ ಯಂತ್ರಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮ್‌ಗಳನ್ನು ಅಕ್ರಮವಾಗಿ ತೆರೆಯಲಾಗಿದೆ ಮತ್ತು ಅವುಗಳ ಟ್ಯಾಂಪರಿಂಗ್‌ಗೆ ಸಂಚು ರೂಪಿಸಲಾಗಿದೆ. ಸ್ಟ್ರಾಂಗ್ ರೂಮ್‌ ಒಳಗಡೆ ಅಪರಿಚಿತ ವ್ಯಕ್ತಿಗಳಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.

ಈ ವೇಳೆ ಮಾತನಾಡಿದ ಮಮತಾ ಬ್ಯಾನರ್ಜಿ, ಇವಿಎಂಗಳನ್ನು ಕಾವಲು ಕಾಯಲು ಕಾರ್ಯಕರ್ತರು 24 ಗಂಟೆಗಳ ಕಾಲ ಜಾಗರೂಕರಾಗಿರಬೇಕು ಮತ್ತು ಮಾಧ್ಯಮಗಳಿಗೆ ಸಿಸಿಟಿವಿ ಪ್ರವೇಶವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಸಚಿವೆ ಶಶಿ ಪಂಜಾ ಮತ್ತು ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು ಕೋಲ್ಕತ್ತಾದ ನೇತಾಜಿ ಇಂದೋರ್ ಸ್ಟೇಡಿಯಂ ಮತ್ತು ಖುದೀರಾಮ್ ಅನುಶೀಲನ್ ಕೇಂದ್ರದ ಹೊರಗೆ ರಾತ್ರಿಯಿಡೀ ಧರಣಿ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!