ಉದಯವಾಹಿನಿ , ಪೋಷಕರು ಬದುಕಿರುವಾಗಲೇ ಮಕ್ಕಳ ಸಾವು ಸಂಭವಿಸುವುದು ಬದುಕಿನ ಅತಿದೊಡ್ಡ ಆಘಾತ. ಇಂತಹದ್ದೇ ಒಂದು ಹೃದಯವಿದ್ರಾವಕ ಘಟನೆ ತಮಿಳು ಚಿತ್ರರಂಗದ ಹೀರೋ ಮನೆಯಲ್ಲಿ ನಡೆದಿತ್ತು. ಖ್ಯಾತ ನಟ ಡೇನಿಯಲ್ ಬಾಲಾಜಿ ಅವರ ನಿಧನದ ನಂತರ ಅವರ ತಾಯಿ ರಾಜಲಕ್ಷ್ಮಿ ಅವರ ಪರಿಸ್ಥಿತಿ ಕಂಡು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಅವರು ಬಂಗಲೆ ತೊರೆದು ಸಣ್ಣ ಮನೆಯಲ್ಲಿ ವಾಸವಾಗುತ್ತಿದ್ದಾರೆ.

ಕೇವಲ ತಮಿಳು ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲೂ ಡೇನಿಯಲ್ ಬಾಲಾಜಿ ತಮ್ಮ ಛಾಪು ಮೂಡಿಸಿದ್ದರು. ಯಶ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಕಿರಾತಕ’ ಮೂಲಕ ಇವರು ಚಂದನವನಕ್ಕೆ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ ‘ಶಿವಾಜಿನಗರ’ದಂತಹ ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರಿಗೂ ಹತ್ತಿರವಾಗಿದ್ದರು. ಅವರ ಕಂಚಿನ ಕಂಠ ಹಾಗೂ ನೈಜ ನಟನೆಯನ್ನು ಕನ್ನಡಿಗರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

2024ರಲ್ಲಿ ಡೇನಿಯಲ್ ಬಾಲಾಜಿ ಕೇವಲ 48ನೇ ವಯಸ್ಸಿಗೆ ಹೃದಯಾಘಾತದಿಂದ ನಿಧನರಾದರು. ಅವರ ಅಕಾಲಿಕ ಮರಣ ಇಡೀ ಚಿತ್ರರಂಗ ಮತ್ತು ಕುಟುಂಬಕ್ಕೆ ತುಂಬಲಾರದ ನಷ್ಟ ತಂದಿತು. ವೇಟ್ಟೈಯಾಡು ವಿಲೈಯಾಡು, ಪೋಲ್ಲಾಧವನ್ ಮತ್ತು ವಾಡಾ ಚೆನ್ನೈನಂತಹ ಸಿನಿಮಾಗಳಲ್ಲಿ ಅವರ ನೆಗೆಟಿವ್ ಶೇಡ್ ಪಾತ್ರಗಳು ಜನಪ್ರಿಯವಾಗಿದ್ದವು.

ಡೇನಿಯಲ್ ಬಾಲಾಜಿ ತಮ್ಮ ತಾಯಿ ರಾಜಲಕ್ಷ್ಮಿ ಅವರಿಗಾಗಿ ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ದೂರಿ ಬಂಗಲೆಯನ್ನು ನಿರ್ಮಿಸಿದ್ದರು. ಮಗನ ಪ್ರೀತಿಯ ಅರಮನೆಯಲ್ಲಿ ತಾಯಿ ವಾಸವಿದ್ದರು. ಆದರೆ ಮಗನ ಸಾವಿನ ನಂತರ ಆ ಮನೆಯ ಪ್ರತಿಯೊಂದು ಮೂಲೆ ಕೂಡ ಮಗನ ನೆನಪನ್ನು ಕಾಡತೊಡಗಿತು.

Leave a Reply

Your email address will not be published. Required fields are marked *

error: Content is protected !!