ಉದಯವಾಹಿನಿ , ಮುಂಬೈ: ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಹೆನ್ರಿಕ್ ಕ್ಲಾಸೆನ್ ತಮ್ಮ ಕುಟುಂಬದ ಖಾಸಗಿತನಕ್ಕೆ ಧಕ್ಕೆ ತಂದ ಅಭಿಮಾನಿಯೊಬ್ಬರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಕ್ಲಾಸೆನ್ ತಮ್ಮ ಪತ್ನಿ ಮತ್ತು ಮಗಳೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯಕ್ಕಾಗಿ ತೆರಳುತ್ತಿದ್ದಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.ತಮ್ಮ ಪತ್ನಿ ಸೊನೆ ಮತ್ತು ಮಗಳೊಂದಿಗೆ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಾಗ, ಅಭಿಮಾನಿಯೊಬ್ಬರು ಕ್ಲಾಸೆನ್ ಅವರ ಅನುಮತಿಯಿಲ್ಲದೆ ತೀರಾ ಹತ್ತಿರದಿಂದ ವಿಡಿಯೋ ಚಿತ್ರೀಕರಿಸುತ್ತಿದ್ದರು.
ಹಲವು ಬಾರಿ ಎಚ್ಚರಿಕೆ ನೀಡಿದರೂ ಅಭಿಮಾನಿ ನಿಲ್ಲಿಸದಿದ್ದಾಗ, “ಇದು ನನ್ನ ಕುಟುಂಬ, ಕ್ಯಾಮೆರಾ ಪಕ್ಕಕ್ಕಿಡು. ನಾನು ನಿನಗೆ ವಿಡಿಯೋ ಮಾಡುವುದು ಬೇಡ ಎಂದು ಹೇಳಿದ್ದೇನೆ, ದಯವಿಟ್ಟು ಇಲ್ಲಿಂದ ಹೋಗು. ಇನ್ನೊಮ್ಮೆ ಫೋಟೋ ತೆಗೆದರೆ ನೀನು ನೆಲದ ಮೇಲೆ ಬೀಳಬೇಕಾಗುತ್ತದೆ” ಎಂದು ಕ್ಲಾಸೆನ್ ಕಠಿಣವಾಗಿ ಎಚ್ಚರಿಸಿದ್ದಾರೆ.ಕ್ಲಾಸೆನ್ ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಇದು ಮೊದಲೆನಲ್ಲ. ಈ ಹಿಂದೆ 2024ರಲ್ಲಿ ಹೈದರಾಬಾದ್‌ನ ಶಾಪಿಂಗ್ ಮಾಲ್ ಒಂದರಲ್ಲಿ ಅಭಿಮಾನಿಗಳು ಅವರನ್ನು ಮುತ್ತಿಕೊಂಡಾಗಲೂ ಕ್ಲಾಸೆನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
