ಉದಯವಾಹಿನಿ, ಇಂಡಿಯಾಸ್ ಗಾಟ್ ಲೇಟೆಂಟ್’ ವಿವಾದದ ಒಂದು ವರ್ಷದ ನಂತರ, ಖ್ಯಾತ ಕಾಮಿಡಿಯನ್ ಸಮಯ್ ರೈನಾ ಮತ್ತು ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಈಗ ನೆಟ್‌ಫ್ಲಿಕ್ಸ್‌ನ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ಗೆ ಒಟ್ಟಿಗೆ ವೇದಿಕೆ ಏರಿದ್ದಾರೆ. ಇಂದು (ಮೇ 2) ರಾತ್ರಿ 8 ಗಂಟೆಗೆ ಪ್ರಸಾರವಾಗಲಿರುವ ಈ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ.

ಕಪಿಲ್ ಶರ್ಮಾ ಅವರು ಕಳೆದ ವರ್ಷದ ವಿವಾದದ ಕುರಿತು ರಣವೀರ್ ಅವರನ್ನು ತಮಾಷೆಯಾಗಿ ಕಾಲೆಳೆದಿದ್ದಾರೆ. ಇದು ಟೀಸರ್​​ನಲ್ಲಿ ಕಾಣಿಸಿದೆ. ಕಾರ್ಯಕ್ರಮದಲ್ಲಿ ರಣವೀರ್ ಅವರು ಸಮಯ್ ಬಗ್ಗೆ ಮಾತನಾಡುತ್ತಾ, ‘ಅವನದ್ದು ತುಂಬಾ ಶುದ್ಧವಾದ ಹೃದಯ, ಅದು ಜನರಿಗೆ ತಿಳಿಯಬೇಕು’ ಎಂದು ಹೊಗಳಿದರು. ತಕ್ಷಣವೇ ಪ್ರತಿಕ್ರಿಯಿಸಿದ ಕಪಿಲ್, ‘ಹೌದು, ಯಾರಾದರೂ ನಿಮ್ಮ ಶೋ ಅನ್ನು ಹಾಳು ಮಾಡಿದರೂ ಅವರು ನಿಮ್ಮನ್ನು ಬದುಕಲು ಬಿಟ್ಟಿದ್ದಾರೆ ಎಂದರೆ ಖಂಡಿತಾ ಅವರ ಹೃದಯ ದೊಡ್ಡದೇ ಇರಬೇಕು’ ಎಂದು ಹೇಳುವ ಮೂಲಕ ಕಳೆದ ವರ್ಷ ರಣವೀರ್ ಅವರ ಜೋಕ್‌ನಿಂದ ಉಂಟಾಗಿದ್ದ ವಿವಾದವನ್ನು ನೆನಪಿಸಿ ನಗೆಗಡಲಲ್ಲಿ ತೇಲಿಸಿದರು. ಇದು ಟೀಸರ್​ ಅಲ್ಲಿ ಕಾಣಿಸಿದೆ.

ಇದೇ ವೇಳೆ ನವಜೋತ್ ಸಿಂಗ್ ಸಿಧು ಅವರು ಸಮಯ್ ಅವರ ಚುರುಕಾದ ಹಾಸ್ಯ ಪ್ರಜ್ಞೆಯನ್ನು ಮೆಚ್ಚಿಕೊಂಡರು. ಆಗ ಸಮಯ್ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ದೇವರು ಒಂದು ಬಾಗಿಲು ಮುಚ್ಚಿದರೆ ಹತ್ತು ಕಿಟಕಿಗಳನ್ನು ತೆರೆಯುತ್ತಾನೆ. ನೀನು ಕಿಟಕಿಗಳನ್ನು ನೋಡುವವನಾಗು’ ಎಂದರು. ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಸಮಯ್, ‘ಸರ್, ಆ ಎಲ್ಲ ಕಿಟಕಿಗಳಿಂದ ಜನ ನಮಗೆ ಕಲ್ಲು ಹೊಡೆಯುತ್ತಾರೆ’ ಎಂದಾಗ ಸಿಧು ನಕ್ಕು ಸುಸ್ತಾದರು. ಸಮಯ್ ಅವರ ಈ ಉತ್ತರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಧು, ‘ಲವ್ ಯೂ ಮಗನೇ, ನೀನು ಅದ್ಭುತ!’ ಎಂದು ಅಪ್ಪಿಕೊಂಡರು.

Leave a Reply

Your email address will not be published. Required fields are marked *

error: Content is protected !!