ಉದಯವಾಹಿನಿ, ಗುರುಗ್ರಾಮ: ರಾಜ್ಯದಲ್ಲಿ ಕೋಮು ಘರ್ಷಣೆ ಮತ್ತು ಹಿಂಸಾಚಾರದಲ್ಲಿ ಗಲಭೆಕೋರರಿಂದ ಸರ್ಕಾರಿ ಮತ್ತು ಖಾಸಗಿ ಆಸ್ತಿಗೆ ಆಗಿರುವ ಹಾನಿ ವಸೂಲಿ ಮಾಡಲು ೨೦೨೧ ರಲ್ಲಿ ಜಾರಿಗೆ ತಂದ ಕಾನೂನನ್ನು ಮತ್ತಷ್ಟು ಬಿಗಿಗೊಳಸಲಾಗುವುದು ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.
ಕೋಮುಗಲಭೆಯಲ್ಲಿ ಇದುವರೆಗೆ ೬ ಮಂದಿ ಸಾವನ್ನಪ್ಪಿದ್ದು ೧೬೬ ಮಂದಿಯನ್ನು ಬಂಧಿಸಲಾಗಿದೆ.ನುಹ್‌ನಲ್ಲಿ ನಡೆದ ಘರ್ಷಣೆಯಿಂದ ಶಸ್ತ್ರಸಜ್ಜಿತ ಭದ್ರತಾ ಪಡೆ ಪಥ ಸಂಚಲನ ನಡೆಸಿದೆ ಎಂದು ತಿಳಿಸಿದ್ದಾರೆ.
ಜನಸಮೂಹ ಧಾರ್ಮಿಕ ಯಾತ್ರೆ ಗುರಿಯಾಗಿಸಿಕೊಂಡು ನಡೆಸಿದ ಗಲಭೆ ಹಿಂಸಾಚಾ
ರಕ್ಕೆ ಪ್ರಚೋದನೆ ನೀಡಿದೆ. ಇದರುವರೆಗೂ ೭೦ ಎಫ್‌ಐಆರ್‌ಗಳನ್ನು ದಾಖಲಿಸಿ ಮತ್ತು ೧೬೬ ಮಂದಿಯನ್ನು ಬಂಧಿಸಲಾಗಿದೆ ಎಂದಿದ್ದಾರೆ. ಇವುಗಳಲ್ಲಿ ನಲವತ್ತೊಂದು ಪ್ರಕರಣಗಳು ನುಹ್‌ನಲ್ಲಿ ಮತ್ತು ೧೮ ಗುರುಗ್ರಾಮದಲ್ಲಿ ದಾಖಲಾಗಿವೆ, ಇದು ಸೊಹ್ನಾ ಮತ್ತು ಬಾದ್‌ಶಪುರ್‌ನಲ್ಲಿ ಗುಂಪು ಹಿಂಸಾಚಾರ ಮತ್ತು ಮಸೀದಿಯ ಮೇಲೆ ದಾಳಿ ಮೇಲಿನ ಪ್ರಕರಣಗಳೂ ಇವೆ ಎಂದಿದ್ದಾರೆ.
