ಉದಯವಾಹಿನಿ, ಬೀದರ್: ಬೀದಿ ನಾಯಿ ದಾಳಿಗೆ 5 ತಿಂಗಳ ಹಸೂಗೂಸು ದುರಂತ ಅಂತ್ಯ ಕಂಡ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ನಡೆದಿದೆ. 5 ತಿಂಗಳ ಶಿವಾನಿ ಮೃತ ಕಂದಮ್ಮ. ಸುಧಾ ಹಾಗೂ ಸಿದ್ದಪ್ಪ ದಂಪತಿಗೆ ಸೇರಿದ ಹಸೂಗೂಸು ಸಾವನ್ನಪ್ಪಿದೆ. ಮನೆಯ ಪಡಸಾಲೆಯಲ್ಲಿ ಮಗುವನ್ನ ಮಲಗಿಸಿ ತಾಯಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಮನೆಗೆ ನುಗ್ಗಿ ಹಸುಗೂಸನ್ನ ನಾಯಿ ಮನಬಂದಂತೆ ಕಚ್ಚಿ ಬಿಸಾಕಿದೆ.

ಅರಜೀವಾವಸ್ಥೆಯಲ್ಲಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಬೀದರ್‌ನ ಬ್ರಿಮ್ಸ್ನಲ್ಲಿ ಸಾವನ್ನಪ್ಪಿದೆ. ದಂಪತಿಗೆ ಈಗಾಗಲೇ ಮೂವರು ಹೆಣ್ಣುಮಕ್ಕಳಿದ್ದು, ಶಿವಾನಿ ನಾಲ್ಕನೇ ಹೆಣ್ಣು ಮಗುವಾಗಿತ್ತು. ಬೀದಿ ನಾಯಿಗಳಿಗೆ ಕಡಿವಾಣ ಹಾಕದೆ ಮಹಾ ನಿರ್ಲಕ್ಷ್ಯ ಮಾಡುತ್ತಿರುವ ಹುಮ್ನಾಬಾದ್ ಪುರಸಭೆ ಅಧಿಕಾರಿಗಳ ವಿರುದ್ಧ ಪಾಲಕರು ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!