ಉದಯವಾಹಿನಿ, ಸಿಂಗಪುರ: ಸಿಂಗಪುರದಲ್ಲಿ ಹಡಗಿನಿಂದ ಬಿದ್ದು ನಾಪತ್ತೆಯಾಗಿದ್ದ ಭಾರತೀಯ ಮೂಲದ ರೀಟಾ ಸಹಾನಿ (64) ಮೃತಪಟ್ಟಿದ್ದಾರೆ ಎಂದು ಅವರ ಮಗ ಬುಧವಾರ ತಿಳಿಸಿದ್ದಾರೆ. ರೀಟಾ ಸಹಾನಿ ಮತ್ತು ಅವರ ಪತಿ ಜಕೇಶ್ ಸಹಾನಿ ಪೆನಾಂಗ್‌ನಿಂದ ಸಿಂಗಪುರಕ್ಕೆ ವಾಪಸಾಗುತ್ತಿದ್ದರು. ಈ ವೇಳೆ ರೀಟಾ ಆಯತಪ್ಪಿ ಜಲಸಂಧಿಗೆ ಬಿದ್ದಿದ್ದರು.ವಿಷಯ ತಿಳಿಯುತ್ತಿದ್ದಂತೆ ಭಾರತೀಯ ಹೈಕಮಿಷನ್ ಸಿಂಗಪುರ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿತ್ತು. ‘ತಾಯಿ ರೀಟಾ ಅವರು ಹುಟ್ಟುಹಬ್ಬದ ದಿನವೇ ನಮ್ಮನ್ನು ಅಗಲಿದ ಸುದ್ದಿ ತಿಳಿದಿದೆ. ಇಂಥ ಸಂದಗ್ಧ ಸಂದರ್ಭದಲ್ಲಿ ನೆರವಿಗೆ ನಿಂತ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಭಾರತ ಹೈಕಮಿಷನ್‌ಗೆ ಧನ್ಯವಾದ’ ಎಂದು ಪುತ್ರ ವಿವೇಕ್ ಸಹಾನಿ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

