ಉದಯವಾಹಿನಿ, ಐಪಿಎಲ್ ಈ ಹಂತದಲ್ಲಿ ಪ್ರತಿಯೊಂದು ಪಂದ್ಯವೂ ನಿರ್ಣಾಯಕವಾಗುತ್ತಿರುವಾಗ, ಮುಂಬೈ ಇಂಡಿಯನ್ಸ್‌ಗೆ ಮುಂದಿನ ಮುಖಾಮುಖಿ ಮಾಡು ಇಲ್ಲವೇ ಮಡಿ ಎಂಬ ಹೋರಾಟವಾಗಿ ಪರಿಣಮಿಸಿದೆ.
ಪ್ಲೇಆಫ್ ಆಸೆಯನ್ನು ಜೀವಂತವಾಗಿಡಬೇಕಾದರೆ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಆದರೆ ಗೆಲುವಿನ ಒತ್ತಡದ ಜೊತೆಗೆ ನಾಯಕತ್ವದ ಪ್ರಶ್ನೆಯೂ ತಂಡದ ಚರ್ಚೆಯ ಕೇಂದ್ರಬಿಂದುವಾಗಿದೆ.
ಈ ಋತುವಿನಲ್ಲಿ ಮುಂಬೈ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. 10 ಪಂದ್ಯಗಳಲ್ಲಿ ಕೇವಲ 3 ಗೆಲುವು ಮಾತ್ರ ದಾಖಲಿಸಿರುವ ತಂಡ, ಈಗ ಉಳಿದ ಎಲ್ಲ ಪಂದ್ಯಗಳನ್ನು ಗೆಲ್ಲುವ ಲೆಕ್ಕಾಚಾರದಲ್ಲಿದೆ. ಆದರೂ 14 ಅಂಕ ತಲುಪಿದರೂ ಪ್ಲೇಆಫ್ ಪ್ರವೇಶಕ್ಕೆ ಇತರ ತಂಡಗಳ ಫಲಿತಾಂಶಗಳ ಮೇಲೂ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
