ಉದಯವಾಹಿನಿ, ಚಂಡಿಗಡ: ಪಂಜಾಬಿನ ವಿದ್ಯುತ್ ಸಚಿವ ಸಂಜೀವ ಅರೋರಾರನ್ನು ಜಾರಿ ನಿರ್ದೇಶನಾಲಯವು (ED) ಶನಿವಾರ ಬಂಧಿಸಿದೆ. ಇದಕ್ಕೂ ಮುನ್ನ ಅದು ಅರೋರಾ ಮತ್ತು ಅವರ ಸಹವರ್ತಿಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ED ಕ್ರಮವನ್ನು ಆಪ್ ಸಂಚಾಲಕ ಅರವಿಂದ ಕೇಜ್ರವಾಲ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಅರೋರಾ (62) ಲುಧಿಯಾನಾ ಪಶ್ಚಿಮ ಕ್ಷೇತ್ರದ ಆಪ್ ಶಾಸಕರಾಗಿದ್ದಾರೆ.
ಅಧಿಕಾರಿಗಳ ಪ್ರಕಾರ, ED ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಅರೋರಾ ಮತ್ತು ಅವರ ಸಂಸ್ಥೆಗಳಿಗೆ ಸಂಬಂಧಿಸಿದ ಚಂಡಿಗಡ ಹಾಗೂ ಹೊಸದಿಲ್ಲಿ-ಎನ್‌ಸಿಆರ್ ಪ್ರದೇಶದಲ್ಲಿಯ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಅರೋರಾರನ್ನು ಇಲ್ಲಿಯ ಸೆಕ್ಟರ್ 2ರಲ್ಲಿರುವ ಅವರ ಅಧಿಕೃತ ನಿವಾಸದಿಂದ ಬಂಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!