ಉದಯವಾಹಿನಿ, ಭುವನೇಶ್ವರ(ಒಡಿಶಾ): ಭುವನೇಶ್ವರದ ತಮಂಡೋ ಪ್ರದೇಶದಲ್ಲಿ ಉಡದ ಕತ್ತು ಬಳಸಿ ಬಿಸಾಡಿದ ಪ್ಲಾಸ್ಟಿಕ್ ಬಾಟಲಿಯೊಳಗೆ ಸಿಲುಕಿ, ವಾಹನಕ್ಕೆ ಅಡ್ಡಲಾಗಿ ಅಥವಾ ಇನ್ನಿತರ ಪರಿಸ್ಥಿತಿಗಳಿಂದ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇತ್ತು. ಈ ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಣಾ ತಂಡ, ಪ್ಲಾಸ್ಟಿಕ್ ಬಾಟಲಿ ತೆಗೆದು ಉಡದ ಪ್ರಾಣ ರಕ್ಷಿಸಿದೆ.
ತಮಂಡೋ ಪ್ರದೇಶದ ನಿವಾಸಿಗಳ ಅಪಾರ್ಟ್ಮೆಂಟ್ನಲ್ಲಿ ಈ ಉಡ ತೊಂದರೆಗೊಳಗಾಗಿ ನರಳುತ್ತಿತ್ತು. ಹೂವಿನ ಕುಂಡದ ಸಮೀಪ ಒದ್ದಾಡುತ್ತಿದ್ದ ಸದ್ದು ಕೇಳಿಸಿದ್ದು, ಸ್ಥಳಕ್ಕೆ ತೆರಳಿ ನೋಡಿದ್ದಾರೆ. ಕೆಲವರು ಕೋಲಿನ ಸಹಾಯದಿಂದ ಬಾಟಲಿಯನ್ನು ಹೊರತೆಗೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ವಿಫಲವಾಗಿದೆ. ಬಳಿಕ ಉರಗ ರಕ್ಷಣೆಯ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಪ್ರಧಾನ ಕಾರ್ಯದರ್ಶಿ ಶುಭೇಂದು ಮಲ್ಲಿಕ್ ನೇತೃತ್ವದಲ್ಲಿ, ಸುರಕ್ಷಿತವಾಗಿ ಉಡವನ್ನು ರಕ್ಷಣೆ ಮಾಡಿದ್ದಾರೆ.
“ಉಪ್ಪಿನಕಾಯಿ ಬಳಸಿ ಬಿಸಾಡಿದ ಬಾಟಲಿಯೊಳಗೆ ಉಡದ ತಲೆ ಸಿಲುಕಿ, ಹೊರಗೆ ಬರಲು ಸಾಧ್ಯವಾಗಿಲ್ಲ. ಸದ್ಯ ಉಡ ರಕ್ಷಣೆ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅದಕ್ಕೆ ಯಾವುದೇ ಹಾನಿಯಾಗಿಲ್ಲ. ಸುರಕ್ಷಿತವಾಗಿ ಹತ್ತಿರದ ಪೊದೆಯ ಬಳಿ ಬಿಡಲಾಗಿದ್ದು, ಎರಡು ನಿಮಿಷದೊಳಗೆ ಕಣ್ಮರೆಯಾಯಿತು” ಎಂದರು.
