ಉದಯವಾಹಿನಿ, ತಮಿಳುನಾಡಿನ ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಪದಗ್ರಹಣ ಮಾಡಿದ್ದಾಯ್ತು. ಇದೀಗ ರಾಜಕೀಯದಲ್ಲಿ ವಿಜಯ್ ಪರ್ವ ಶುರುವಾಗಿದೆ. ಹಾಗಂತ ಸಿನಿಮಾ ಫ್ಯಾನ್ಸ್‌ಗೆ ನಿರಾಸೆ ಮಾಡುತ್ತಿಲ್ಲ ವಿಜಯ್. ಇದೀಗ ʼಜನನಾಯಗನ್ʼ ಚಿತ್ರ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಈ ಮೂಲಕ ಮತ್ತೊಂದ್ ಮಾಸ್ ವಿಜಯೋತ್ಸವಕ್ಕೆ ಫ್ಯಾನ್ಸ್ ಸಜ್ಜಾಗುತ್ತಿದ್ದಾರೆ.
`ಸಿ ಜೋಸೆಫ್ ವಿಜಯ್ ಎಂಬ ನಾನು’ ಎಂದು ವಿಜಯ್ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಕಾರ್ಯಕರ್ತರ ಹರ್ಷದ ಕಟ್ಟೆ ಒಡೆದಿದೆ. ಸಿನಿಮಾ ಸ್ಟೈಲ್ ಅನ್ನ ನಿಜ ಮಾಡಿದ ವಿಜಯ್ ಮೇಲೆ ಭರವಸೆಯ ಮಹಾಪೂರವೇ ಇದೆ. ಸದ್ಯಕ್ಕೆ ಇಡೀ ದೇಶ ವಿಜಯ್ ಆಳ್ವಿಕೆ ನೋಡಲು ಕಾದಿದೆ.
ರಾಜಕೀಯದ ಯುಗಾರಂಭ ಶುರು ಮಾಡಿದ್ದಾರೆ ವಿಜಯ್. ಹೀಗಂತ ಡೈಹಾರ್ಡ್ ಸಿನಿಮಾ ಫ್ಯಾನ್ಸ್ ನಿರಾಸೆ ಆಗಬೇಕಿಲ್ಲ. ಶೀಘ್ರದಲ್ಲೇ ವಿಜಯ್ ಕಟ್ಟ ಕಡೆಯ ಚಿತ್ರ ಎಂದು ಘೋಷಿಸಿರುವ ಜನನಾಯಗನ್ ಚಿತ್ರ ರಿಲೀಸ್ ಆಗಲಿದೆ.

ಪಕ್ಷ ಘೋಷಣೆ ಮಾಡಿ ರಾಜಕೀಯದಲ್ಲಿ ಸಕ್ರಿಯವಾಗಿದ್ದಾಗಲೇ ವಿಜಯ್ ಜನನಾಯಗನ್ ಚಿತ್ರ ಮಾಡಿದ್ದರು. ಇದು ಕನ್ನಡ ಮೂಲದ ಚಿತ್ರ ನಿರ್ಮಾಣ ಸಂಸ್ಥೆ ವೆಂಕಟ್ ನಾರಾಯಣ್ ನಿರ್ಮಾಣದ ಬಿಗ್ ಪ್ರಾಜೆಕ್ಟ್ ಚಿತ್ರವಾಗಿದೆ. ಕಳೆದ ಜನವರಿ 9 ರಂದೇ ಚಿತ್ರ ತೆರೆಕಾಣಬೇಕಿತ್ತು. ಆದರೆ ಈ ಚಿತ್ರವು ಜನರ ಮೇಲೆ ಪ್ರಭಾವ ಬೀರಿ ವಿಜಯ್‌ಗೆ ಪ್ಲಸ್ ಆಗಬಹುದು ಅನ್ನೋ ಕಾರಣಕ್ಕೆ ಹಿಂದಿನ ಸರ್ಕಾರದ ಕೈವಾಡದಲ್ಲಿ ಸೆನ್ಸಾರ್ ಆಗದೆ ಉಳಿದಿತ್ತು. ಹಲವು ಬಾರಿ ಸೆನ್ಸಾರ್ ಮಂಡಳಿ ಕದ ತಟ್ಟಿದ್ದರೂ ಕಾರಣಗಳನ್ನ ಕೊಟ್ಟು ಸೆನ್ಸಾರ್ ಮಂಡಳಿ ನಿರಾಕರಿಸಿತ್ತು. ಇದುವರೆಗೂ ಜನನಾಯಗನ್ ಸೆನ್ಸಾರ್ ಆಗಿಲ್ಲ. ಆದರೆ ಇದೀಗ ವಿಜಯ್ ಸರ್ಕಾರವೇ ರಚನೆ ಆಗಿದೆ.

 

Leave a Reply

Your email address will not be published. Required fields are marked *

error: Content is protected !!