ಉದಯವಾಹಿನಿ, ರಾಯ್ಪುರ: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮಧ್ಯದ ಬೆರಳನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟಿಮ್ ಡೇವಿಡ್‌ಗೆಪಂದ್ಯದ ಸಂಭಾವನೆಯಲ್ಲಿ ಶೇ.30ರಷ್ಟು ದಂಡ ವಿಧಿಸಿಲಾಗಿದೆ. ರಾಯ್ಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿತ್ತು. ಈ ವೇಳೆ ಪೆವಿಲಿಯನ್‌ನಲ್ಲಿ ಕೂತಿದ್ದ ಟಿಮ್ ಡೇವಿಡ್ ತನ್ನ ಎರಡೂ ಕೈಗಳ ಮಧ್ಯದ ಬೆರಳನ್ನು ತೋರಿಸಿ ಅಶಿಸ್ತು ಪ್ರದರ್ಶಿಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಐಪಿಲ್ ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿದೆ.
ಟಿಮ್ ಡೇವಿಡ್ ಐಪಿಎಲ್ ನಿಯಮಗಳ ಪ್ರಕಾರ ಈ ರೀತಿಯ ಆಕ್ಷೇಪಾರ್ಹ ಸನ್ನೆ ಕೋಡ್ ಆಫ್ ಕಂಡಕ್ಟ್ ಆರ್ಟಿಕಲ್ 2.6 ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ., ಟಿಮ್ ಡೇವಿಡ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಶೇ. 30 ದಂಡದ ಜೊತೆಗೆ ಡೇವಿಡ್ ಅವರಿಗೆ ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ.
