ಉದಯವಾಹಿನಿ, ಜೋಧ್‌ಪುರ : ಪಾಕಿಸ್ತಾನದಿಂದ ಬಂದಿದ್ದ ಸೀಮಾ ಹೈದರ್ ಮತ್ತು ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ್ದ ಅಂಜು ಅವರ ಪ್ರೇಮ ವಿವಾಹದ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೇ ರೀತಿ ಪ್ರೇಮ ಪ್ರಕರಣ ಹೋಲುವಂತಹ ಘಟನೆ ನಡೆದಿದೆ. ಜೋಧಪುರದ ಅರ್ಬಾಜ್ ಪಾಕಿಸ್ತಾನಿ ವಧು ಅಮೀನಾ ಅವರನ್ನು ವರ್ಚುವಲ್ ಮೂಲಕ ವಿವಾಹವಾದರು. ಅದೂ ಕೂಡ ಸಂಪೂರ್ಣ ವಿಧಿವಿಧಾನಗಳೊಂದಿಗೆ ಮದುವೆಯಾಯಿತು. ಇಬ್ಬರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಮದುವೆಯಾದರು. ಖಾಜಿಗಳು ನಿಕಾಹ್ ಓದಿದ್ಧರು.
ಹುಡುಗ-ಹುಡುಗಿ ಕುಬೂಲ್ ಹೈ ಎಂದರು. ದಂಪತಿಗಳು ತಮ್ಮ ಇಡೀ ಕುಟುಂಬ ಮತ್ತು ಸಂಬಂಧಿಕರ ಸಮ್ಮುಖದಲ್ಲಿ ವಿವಾಹವಾದರು. ಎಲ್ ಇಡಿಯಲ್ಲಿ ಮದುವೆ ಸಮಾರಂಭವನ್ನು ಸಂಬಂಧಿಕರು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.  ಜೋಧ್‌ ಪುರದ ಒಳನಗರದ ಖೇರಾದಿಸ್ ಪ್ರದೇಶದಲ್ಲಿ ವಾಸಿಸುತ್ತಿರುವ ಸಿವಿಲ್ ಗುತ್ತಿಗೆದಾರ ಮೊಹಮ್ಮದ್ ಅಫ್ಜಲ್ ಅವರ ಹಿರಿಯ ಪುತ್ರ ಮತ್ತು ಅವರ ಪಾಕಿಸ್ತಾನಿ ವಧು ವಿವಾಹವಾಗಿದ್ದಾರೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ಹೊರತಾಗಿಯೂ, ಪ್ರೀತಿಯ ಸಂಬಂಧಗಳು ಅಭಿವೃದ್ಧಿಗೊಳ್ಳುತ್ತಲೇ ಇವೆ. ಈಗ ಮದುವೆ ಮುಗಿದಿದೆ. ಹಾಗಾಗಿ ವೀಸಾಗೆ ಅರ್ಜಿ ಹಾಕಿದರೆ ಸಿಗುತ್ತದೆ. ಆಗ ವಧು ಮನೆಗೆ ಬರುತ್ತಾಳೆ. ಇಡೀ ಕುಟುಂಬ ಮದುವೆ ಕಾರ್ಯಕ್ರಮದಲ್ಲಿ ಸಂತೋಷವಾಗಿದೆ ವರನ ಸಂಬಂಧಿಕ ಮೊಹಮ್ಮದ್ ಅಫ್ಜಲ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!