ಉದಯವಾಹಿನಿ, ಜೆರುಸಲೇಂ : ಇಸ್ರೇಲ್‌ನ ಸೈಬರ್ ಟೆಕ್ ಸಂಸ್ಥೆ‘ಸೆಲೆಬ್ರೈಟ್’ನ ಆಕ್ರಮಣಕಾರಿ ತಂತ್ರಜ್ಞಾನವನ್ನು ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ಹಾಗೂ ಇತರ ಹಲವು ಪೊಲೀಸ್ ಘಟಕಗಳು ಬಳಸುತ್ತಿವೆ ಎಂದು ಇಸ್ರೇಲ್‌ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಒಂದೆಡೆ ಇಸ್ರೇಲ್ ಅನ್ನು ದೇಶವೆಂದೇ ಪರಿಗಣಿಸದಿರುವ ಪಾಕಿಸ್ತಾನ ಇದೀಗ ಆ ದೇಶದ ತಂತ್ರಜ್ಞಾನ ಬಳಸುತ್ತಿರುವುದು ಹಲವು ವಿವಾದಗಳಿಗೆ ಕೂಡ ಕಾರಣವಾಗಿದೆ.
ಇಸ್ರೇಲ್‌ನ ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲದಿದ್ದರೂ ಮತ್ತು ಉಭಯ ದೇಶಗಳು ರಾಜತಾಂತ್ರಿಕ ಸಂಬಂಧ ಹೊಂದಿರದಿದ್ದರೂ ಪಾಕಿಸ್ತಾನದ ತನಿಖಾ ಸಂಸ್ಥೆಗಳು ೨೦೨೧ರಿಂದ ಇಸ್ರೇಲ್‌ನ ಸೈಬರ್ ತಂತ್ರಜ್ಞಾನ ಬಳಸುತ್ತಿದ್ದು ಇದು ಗಂಭೀರ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಬಹುದು ಎಂದು ಹಾರ್ತೆಝ್ ಸುದ್ಧಿಸಂಸ್ಥೆಯ ವರದಿ ಹೇಳಿದೆ. ‘ಸೆಲೆಬ್ರೈಟ್’ ಸಂಸ್ಥೆಯ ವಿಶಿಷ್ಟ ಉತ್ಪನ್ನವಾದ ಯುಎಫ್‌ಇಡಿಯನ್ನು ನಾಸ್ಡಾಕ್’ ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿದ್ದು ಇದನ್ನು ಬಳಸಿ ಪಾಸ್‌ವರ್ಡ್ ರಕ್ಷಿತ ಸೆಲ್‌ಫೋನ್‌ಗಳನ್ನು ಹ್ಯಾಕ್ ಮಾಡಿ ಅದರಲ್ಲಿ ಸಂಗ್ರಹಗೊಂಡಿರುವ ಮಾಹಿತಿಯನ್ನು ಕಾಪಿ ಮಾಡಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!