ಉದಯವಾಹಿನಿ, ಬೇರೂತ್ (ಸಿರಿಯಾ): ವಾಯುವ್ಯ ಸಿರಿಯಾದಲ್ಲಿ ನಡೆದ ಭೀಕರ ಘರ್ಷಣೆಯಲ್ಲಿ ನಮ್ಮ ನಾಯಕ ನಾಯಕ ಅಬು ಅಲ್-ಹುಸೇನ್ ಅಲ್-ಹುಸೇನಿ ಅಲ್-ಖುರಾಶಿ ಅವರು ಮೃತಪಟ್ಟಿದ್ದಾರೆ ಎಂದು ಇಸ್ಲಾಮಿಕ್ ಸ್ಟೇಟ್ (ಐಎಸ್) ತಿಳಿಸಿದೆ. ಈ ಹಿನ್ನೆಲೆ
ಯಲ್ಲಿ ಇಸ್ಲಾಮಿಕ್ ಸ್ಟೇಟ್ ನೂತನ ನಾಯಕನನ್ನಾಗಿ ಅಬು ಹಫ್ಜಾ ಅಲ್-ಹಶೆಮಿ ಅಲ್-ಕುರಾಶಿ ಹೆಸರನ್ನು ಘೋಷಿಸಲಾಗಿದೆ.
ಇದ್ಲಿಬ್ ಪ್ರಾಂತ್ಯದಲ್ಲಿ ಜಿಹಾದಿ ಗುಂಪು ಹಯಾತ್ ತಹ್ರೀರ್ ಅಲ್-ಶಾಮ್‌ನೊಂದಿಗೆ ನೇರ ಘರ್ಷಣೆಯಲ್ಲಿ ಅಲ್ ಹುಸೇನಿ ಮೃತಪಟ್ಟಿದ್ದಾರೆ ಎಂದು ಇಸ್ಲಾಮಿಕ್ ಸ್ಟೇಟ್ ವಕ್ತಾರರು ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ತನ್ನ ಚಾನಲ್‌ಗಳಲ್ಲಿ ರೆಕಾರ್ಡ್ ಮಾಡಿದ ಸಂದೇಶದಲ್ಲಿ ತಿಳಿಸಿದ್ದಾರೆ.ಆದರೆ ಯಾವಾಗ ನಡೆದ ಕಾಳಗದಲ್ಲಿ ಹುಸೇನಿ ಮೃತಪಟ್ಟರು ಎಂಬ ವಿಚಾರವನ್ನು ಇಸ್ಲಾಮಿಕ್ ಸ್ಟೇಟ್ ಸರಿಯಾಗಿ ತಿಳಿಸಿಲ್ಲ. ೨೦೧೪ರಲ್ಲಿ ತೀವ್ರ ರೀತಿಯಲ್ಲಿ ಉತ್ತುಂಗಕ್ಕೆ ಏರಿದ್ದ ಐಎಸ್ ಸಂಘಟನೆ ಬಳಿಕ ಮತ್ತೊಂದು ಕಡೆಯ ಪ್ರತಿರೋಧದ ಹಿನ್ನೆಲೆಯಲ್ಲಿ ನಿಧಾನವಾಗಿ ತನ್ನ ಅಬ್ಬರತೆಯನ್ನು ಕಳೆದುಕೊಂಡಿತ್ತು. ಅಲ್ಲದೆ ೨೦೧೭ರಲ್ಲಿ ಇರಾಕ್ ಹಾಗೂ ೨೦೧೯ರಲ್ಲಿ ಸಿರಿಯಾದಲ್ಲಿ ಐಎಸ್ ಸೋಲಿನ ಹೊರತಾಗಿಯೂ ಇದರ ಸ್ಲೀಪರ್ ಸೆಲ್‌ಗಳು ಇನ್ನೂ ಎರಡೂ ದೇಶಗಳಲ್ಲಿ ದಾಳಿಗಳನ್ನು ನಡೆಸುತ್ತಿದ್ದಾರೆ.
