
ಉದಯವಾಹಿನಿ, ಮೆಕ್ಸಿಕೊ ಸಿಟಿ (ಮೆಕ್ಸಿಕೊ): ಆರು ಮಂದಿ ಭಾರತೀಯರು ಸೇರಿದಂತೆ ೪೦ ಮಂದಿ ಪ್ರಯಾಣಿಸುತ್ತಿದ್ದ ಬಸ್ ೧೬೪ ಅಡಿ ಆಳದ ಕಂದಕಕ್ಕೆ ಬಿದ್ದು ಕನಿಷ್ಠ ೧೭ ಮಂದಿ ಮೃತಪಟ್ಟಿರುವ ದಾರುಣ ಘಟನೆ ಮೆಕ್ಸಿಕೋದ ನಯಾರಿತ್ ರಾಜ್ಯದಲ್ಲಿ ನಡೆದಿದೆ. ಘಟನೆಯಲ್ಲಿ ೨೨ ಮಂದಿಗೆ ಗಾಯಗಳಾಗಿದ್ದು, ಅವರ ಆರೋಗ್ಯಸ್ಥಿತಿ ಸ್ಥಿರವಾಗಿದೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಬಸ್‌ನಲ್ಲಿ ಭಾರತ, ಡೊಮಿನಿಕನ್ ರಿಪಬ್ಲಿಕ್ ಮತ್ತು ಆಫ್ರಿಕನ್ ರಾಷ್ಟ್ರಗಳ ನಾಗರಿಕರು ಸೇರಿದಂತೆ ಸುಮಾರು ೪೨ ಪ್ರಯಾಣಿಕರಿದ್ದು, ಅತೀ ವೇಗದ ಚಾಲನೆಯಿಂದ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅತೀ ಆಳವಾದ ಕಂದಕಕ್ಕೆ ಉರುಳಿರುವ ಪರಿಣಾಮ ಸದ್ಯ ಪರಿಹಾರ ಕಾರ್ಯಾಚರಣೆ ತೀರಾ ಕಷ್ಟಕರವಾಗಿದೆ ಎಂದು ಭದ್ರತಾ ಮತ್ತು ನಾಗರಿಕ ಸುರಕ್ಷಾ ಕಾರ್ಯದರ್ಶಿ ಜಾರ್ಜ್ ಬೆನಿಟೊ ರಾಡ್ರಿಗಸ್ ಹೇಳಿದ್ದಾರೆ. ೧೪ ಮಂದಿ ಮಕ್ಕಳು ಹಾಗೂ ಮೂವರು ದುರಂತದಲ್ಲಿ ಮೃತಪಟ್ಟಿದ್ದು, ತಿಜುನಾ ನಗರಕ್ಕೆ ಹೊರಟಿದ್ದ ಬಸ್ ರಸ್ತೆಯಿಂದಾಚೆ ಚಲಿಸಿ ಕಂದಕಕ್ಕೆ ಉರುಳಲು ಕಾರಣ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
