
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಸುಲೇಪೇಟ ಗ್ರಾಮ ಪಂಚಾಯತನ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಂತೋಷ ಮೇಘರಾಜ ರಾಠೋಡ್ ಉಪಾಧ್ಯಕ್ಷರಾಗಿ ಮೀರಾಜಬೇಗಂ ಫಾಜೀಲ ಅಹೇಮದ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ರಾಜೇಶ ಪಾಟೀಲ ತಿಳಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಒಂದೆ ನಾಮಪತ್ರ ಸಲ್ಲಿಕೆ ಆಗಿರುವುದರಿಂದ ಆವಿರೋಧ ಆಯ್ಕೆ,ಉಪಾಧ್ಯಕ್ಷ ಸ್ಥಾನಕ್ಕೆ ಒಟ್ಟು ನಾಲ್ಕು ನಾಮಪತ್ರ ಸಲ್ಲಿಕೆಯಾಗಿದ್ದು ಎರಡು ನಾಮಪತ್ರ ತೀರಸ್ಕೃತವಾಗಿದ್ದು ಒಂದು ನಾಮಪತ್ರ ಹಿಂಪಡೆಯುವುದರಿಂದ ಒಂದು ನಾಮಪತ್ರ ಕ್ರಮ ಬದ್ಧವಾಗಿರುವುದರಿಂದ ಉಪಾಧ್ಯಕ್ಷ ಸ್ಥಾನವು ಅವಿರೋಧವಾಗಿ ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಸುಲೇಪೇಟ ಗ್ರಾಪಂ.ಅಧ್ಯಕ್ಷರ-ಉಪಾಧ್ಯಕ್ಷರು ಕಾಂಗ್ರೆಸ್ ಪಕ್ಷದ ಬೆಂಬಲಿಗರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದಂತೆ ಸೇಡಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಿರಿಯ ಮುಖಂಡರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ ಪಾಟೀಲ ಸಹೋದರಾದ ಬಸವರಾಜ ಪಾಟೀಲ ಊಡಗಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಶಿವಶರಣರೆಡ್ಡಿ ಪಾಟೀಲ,ಕಾಂತಪ್ಪ ಪಡಶೇಟ್ಟಿ,ನಾಗೇಶ್ವರ ಪಾಟೀಲ,ಮಹಾರುದ್ರಪ್ಪ ದೇಸಾಯಿ,ಜಾಕೀರ ಪಟೇಲ,ಬಸವರಾಜ ಸಜ್ಜನ,ಬಸವರಾಜ ಬೀರಾದಾರ,ತಾಹೇರ ಪಟೇಲ,ಮೇಘರಾಜ ರಾಠೋಡ್,ಜಹೀರೋದ್ದಿನ ಪಟೇಲ,ಜಾಫರ್ ಖುರೇಷಿ,ರಾಮಶೇಟ್ಟಿ ಪವ್ಹಾರ,ಡಾ.ತುಕ್ಕಾರಾಮ ಪವ್ಹಾರ,ಅಮರೇಶ ಬಸುದೆ,ಮಾಜಿ ಗ್ರಾಪಂ.ಅಧ್ಯಕ್ಷೆ ಸರಸ್ವತಿ ಮಲ್ಲಕಾರ್ಜುನ ಗಿರಿ,ಮಾಜಿ ಗ್ರಾಪಂ ಅಧ್ಯಕ್ಷ ಸುನೀಲಕುಮಾರ ಕೋರಿ,ರುದ್ರಶೇಟ್ಟಿ ಪಡಶೇಟ್ಟಿ,ಚಾಂದಪಾಶಾ ಮೋಮಿನ್,ಬಾಬಣ್ಣ ಗುಲಗುಂಜಿ,ನಾಗಶೇಟ್ಟಿ ಕೋಟಗಿ,ಸೈಯದ್ ಮಸ್ತಾನ್,ಮಲಶೇಟ್ಟಿ ಪಡಶೇಟ್ಟಿ,ಶಿವಕುಮಾರ ಸಜ್ಜನ,ರವಿ ರಾಠೋಡ್,ರಜಾಕ ಪಟೇಲ,ನಾಸೀರ್ ಮದ್ದರಗಿ,ದಿಲೀಪಕುಮಾರ ಸಜ್ಜನ,ಸಚೀನ ಚವ್ಹಾಣ,ಮುನ್ನಾ ಪಟೇಲ,ಅನೇಕ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಇದ್ದರು.
