ಉದಯವಾಹಿನಿ,ಸೌದಿ ಅರೇಬಿಯಾ:
ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧಕ್ಕೆ ಅಂತ್ಯ ಹಾಡಲು ಇಡೀ ಜಗತ್ತು ಒಂದಾಗಿದೆ. ಇದೇ ವೇಳೆ ಶಾಂತಿ ಮಾತುಕತೆಗೆ ಮೀಟಿಂಗ್ ಕೂಡ ಶುರುವಾಗಿದೆ. ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಭಾರತ ಕೂಡ ಪ್ರಮುಖ ಪಾತ್ರ ವಹಿಸಿದೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೌದಿ ಅರೇಬಿಯಾದಲ್ಲಿ ಆರಂಭ ಆಗಿರುವ ರಷ್ಯಾ & ಉಕ್ರೇನ್ ಶಾಂತಿ ಮಾತುಕತೆಯಲ್ಲಿ ಭಾಗವಹಿಸಿದ್ದರು. ಈ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಮಾರ್ಗ ಕಂಡುಕೊಳ್ಳುವ ಉದ್ದೇಶದಿಂದ ಸಮ್ಮೇಳನಕ್ಕೆ ಭಾರತವನ್ನು ಕೂಡ ಆಹ್ವಾನಿಸಲಾಗಿದೆ. ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಜೆಡ್ಡಾದಲ್ಲಿ ಸಭೆಯನ್ನ ಆಯೋಜನೆ ಮಾಡಿದ್ದು 2 ದಿನದ ಸಮ್ಮೇಳನದಲ್ಲಿ ಒಟ್ಟು 40 ದೇಶದ ಭದ್ರತಾ ಅಧಿಕಾರಿಗಳು ಭಾಗವಹಿಸಿದ್ದಾರೆ. ನಿನ್ನೆಯಿಂದ ಶುರುವಾದ ಈ ಸಭೆಯಲ್ಲಿ ಭಾರತವೂ ಭಾಗವಹಿಸಿದೆ.
