ಉದಯವಾಹಿನಿ,ಕಾರಟಗಿ: ಬಡ ಮತ್ತು ಕೆಳ ವರ್ಗದ ಮಕ್ಕಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರ ಇಂದ್ರ ಧನುಷ್ ಯೋಜನೆ ಜಾರಿಗೆ ತಂದಿದ್ದು ಆ ಒಂದು ಯೋಜನೆ ಇಂದಿನಿAದ ಆರಂಭವಾಗಿದೆ. ಇದರ ಸದುಪಯೋಗವನ್ನು ಅರ್ಹ ಮಕ್ಕಳು ಮತ್ತು ಗರ್ಭಿಣೀಯರು ಪಡೆದುಕೊಳ್ಳಬೇಕು ಎಂದು ಹಿಂದುಳಿದ ವರ್ಗಗಗಳ ಕಲ್ಯಾಣ ಖಾತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು. ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಸೋಮವಾರ ಪಟ್ಟಣದ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡ ಪರಿಣಾಮಕಾರಿ ಮಿಷನ್ ಇಂದ್ರ ಧನುಷ್ ೫.೦. ಅಭಿಯಾನದಲ್ಲಿ ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಜಿಲ್ಲೆಯಲ್ಲಿ ೦.ರಿಂದ ೨ ವರ್ಷದೊಳಗಿನ ೫೦೯೯ ಮಕ್ಕಳಿಗೆ, ೩.ರಿಂದ ೫ ವರ್ಷದೊಳಗಿನ ೫೧೦ ಮಕ್ಕಳಿಗೆ ಹಾಗೂ ೧೨೦೭ ಗರ್ಭಿಣಿಯರಿಗೆ ಈ ಲಸಿಕೆ ಹಾಕಲಾಗುತ್ತದೆ. ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆಯ ಎಲ್ಲಾವೈದ್ಯರು, ಸಿಬ್ಬಂದಿ ಅದರಲ್ಲೂ ವಿಶೇಷವಾಗಿ ಆಶಾಕಾರ್ಯಕರ್ತೆಯರು ಮಕ್ಕಳು ಮತ್ತು ಗರ್ಭಿಣಿಯರಿಗೆ ೧೧ ರೋಗಗಳ ವಿರುದ್ಧ ರಕ್ಷಿಸಲ್ಪಡುವ ಈ ಅಮೂಲ್ಯ ಲಸಿಕೆಗಳನ್ನ ನೀಡಿ ಅವರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿ ಆರೋಗ್ಯಕರ ಸಮೂದಾಯ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಅದ್ಭುತ ಸೇವೆ ಸಲ್ಲಿಸುತ್ತಿರುವ ಡಾ|| ಮಂಜುನಾಥ ರವರು ನಿವೃತ್ತರಾದರೂ ಅವರ ಸೆವೆಯನ್ನು ಸರಕಾರಗಳು ಪಕ್ಷಾತೀತವಾಗಿ ಮುಂದುವರೆಸಿಕೊAಡು ಬರುತ್ತಿವೆ. ಜನಸೇವೆಯಲ್ಲಿ ತೊಡಗಿರುವವರನ್ನು ವರ್ಗಾವಣೆಮಾಡಲು ಮನಸೇ ಬರುತ್ತಿಲ್ಲಾ. ಹಾಗೆಯೆ ಈ ಹಿಂದೆ ಪಟ್ಟಣದ ಆರೋಗ್ಯಕೇಂದ್ರದಲ್ಲಿ ಸೇವೆ ಸಲ್ಲಿಸಿದ ದಕ್ಷವೈದ್ಯ ಎಂದೇ ಜನರಿಂದ ಪ್ರಶಂಸೆಗೆ ಪಾತ್ರರಾದ ಡಾ|| ರವೀದ್ರನಾಥ ಮೇಟಿಯವರ ಸೇವೆಯನ್ನು ಇಗಲೂ ನೆನೆಸಿಕೊಳ್ಳುತ್ತಾರೆ. ಹಾಗೆಯೆ ಸಾರ್ವಜನಿಕರು ಪ್ರಶಂಶಿಸುವ0ತೆ ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ಟಿ.ಲಿಂಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವೈದ್ಯರು, ಸಿಬ್ಬಂದಿ ಇದ್ದರು.
