ಉದಯವಾಹಿನಿ,ಚಿಂಚೋಳಿ: ನನ್ನ ಅಧಿಕಾರದ ಅವಧಿಯಲ್ಲಿ ಸುಲೇಪೇಟ ಗ್ರಾಮ ಪಂಚಾಯತನಲ್ಲಿ ಒಳ್ಳೆಯ ಕೆಲಸ ಮಾಡುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಸುಲೇಪೇಟ ಗ್ರಾಪಂ.ನೂತನ ಅಧ್ಯಕ್ಷ ಸಂತೋಷ ರಾಠೋಡ್ ಹೇಳಿದರು.
ತಾಲ್ಲೂಕಿನ ಸುಲೇಪೇಟ ಗ್ರಾಪಂ.ಅಧ್ಯಕ್ಷ ಮತ್ತು ಉಪಾಧ್ಯಕ್ಷೆ ಮೀರಾಜ ಬೇಗಂ ಆಯ್ಕೆಯಾದ ನಂತರ ಗ್ರಾಮದಲ್ಲಿ ಆರ್.ಕೆ ಕನಸಲಟೆನ್ಸಿ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,ಸುಲೇಪೇಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು. ಪ್ರತಿ ಓಣಿಗೆ ಕುಡಿಯುವ ನೀರು,ಪ್ರತಿಯೊಬ್ಬರಿಗೂ ವಿದ್ಯುತ್‌ ಮತ್ತು ಸೂರು ಇಲ್ಲದವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಲಾಗುವುದು.
ಗ್ರಾಪಂ.ಸದಸ್ಯರ ಗ್ರಾಮದ ಮುಖಂಡರ ಹಾಗೂ ಗ್ರಾಮಸ್ಥರ ಬೆಂಬಲದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ,ಗ್ರಾಪಂನಲ್ಲಿ ಸರ್ವರಿಗೂ ಸಮಬಾಳು ಎಂಬಂತೆ ಎಲ್ಲರ ಮಾರ್ಗದರ್ಶನ ಪಡೆದು ಕೆಲಸ ನಿರ್ವಹಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ ಆರ್.ಕೆ.ಕನಸಲಟೆನ್ಸಿ ಮುಖ್ಯಸ್ಥ ಖ್ವಾಜಾ ಭಾಗವಾನ,ರಜಾಕ ಭಾಗವಾನ,ಅಕ್ರಂ ಪಾಶಾ ಮೋಮಿನ್,ಯಾಸೀನ್,ಅಬ್ದುಲ್ ಲತಿಫ್,ಫಾಜೀಲ್ ಕೋಹಿರ,ಬಬ್ಲು ಭಾಗವಾನ,ತೈಯಬ್ ಖುರೇಷಿ,ಸಾಧಿಕ,ವಸೀಮ್ ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!