
ಉದಯವಾಹಿನಿ ಇಂಡಿ : ಇಂಡಿ ತಾಲೂಕಾ ಮಾನ್ಯ ಉಪವಿಭಾಗಾಧಿಕಾರಿಗಳು ಇಂಡಿ ಇವರಿಗೆ, ದಲಿತ ಸಂಘಟನೆಗಳು & ದಲಿತರನ್ನು ಸಾರ್ವಜನಿಕ ಸಭೆಯಲ್ಲಿ ಅವಮಾನ ಮಾಡಿರುವ ಅಧಿಕಾರಿಯ ಮೇಲೆ ದೂರು ದಾಖಲಿಸುವ ಕುರಿತು.ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇಂಡಿ ತಾಲೂಕಾ ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ (ಅಂಬೇಡ್ಕರ) ತಾಲೂಕಾ ಅಧ್ಯಕ್ಷರು ಇಂಡಿ ಚಂದ್ರಶೇಖರ ಮೇಲಿನಮನಿ ಹಾಗು ಸರ್ವ ಪದಾಧಿಕಾರಿಗಳು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಪಟ್ಟಣದಲ್ಲಿ ದಿನಾಂಕ: 04/08/2023 ರಂದು ಇಂಡಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಯ ಮುಖಂಡರು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ನಡೆದ ಸ್ವಾತಂತ್ರೋತ್ಸವದ ಪೂರ್ವಭಾವಿ ಸಭೆಯಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಬಿ.ಜೆ ಇಂಡಿ ಇವರು ದಲಿತ ಸಂಘಟನೆಗಳು ಹಾಗೂ ದಲಿತರ ಕುರಿತು ಸಭೆಯಲ್ಲಿ ಮಾತನಾಡುತ್ತಾ ಎಲ್ಲಾ ದಲಿತ ಸಂಘಟನಾಕಾರರು ಸುಲಿಗೆಕೊರರು ಎಂದು ದಲಿತ ಜನಾಂಗದವರಿಗೆ ಕೀಳಾಗಿ ಮಾತಾಡಿ ಅವಮಾನ ಮಾಡಿದ್ದು ಇರುತ್ತದೆ. ಕೂಡಲೇ ಸದರಿ ಅಧಿಕಾರಿಯ ಮೇಲೆ, ಎಸ್.ಸಿ., ಎಸ್.ಟಿ ಕಾಯಿದೆ ಅಡಿ ಜಾತಿ ನಿಂದನೆ ದೂರು ದಾಖಲಿಸಲು ಕಾನೂನು ಕ್ರಮ ಕೈಗಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಪರಸು ಬಾವಿಕಟ್ಟಿ. ಪರಸು ಉಕ್ಕಲಿ. ಮೇರಾ ವಾಗಮೋರೆ. ಶಿವಾನಂದ ಹರಿಜನ. ಚಂದ್ರಮ ಮಾದರ. ಶಶಿಕುಮಾರ ಹರಿಜನ. ಬಸು ಮಾಶ್ಯಳ
