
ಉದಯವಾಹಿನಿ ತಾಳಿಕೋಟಿ: ವೀ. ವಿ. ಸಂಘದ, ಎಸ್ .ಕೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿನಾಂಕ ೦೮-೦೮-೨೦೨೩ ರಂದು ಎನ್.ಎಸ್.ಎಸ್ ಘಟಕ & ಸಮಾನ ಅವಕಾಶ ಕೋಶ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಇವುಗಳ ಸಂಯೋಗದೊ0ದಿಗೆ “ಕಣ್ಣಿನ ಸುರಕ್ಷತಾ ಜಾಗ್ರತಿ ”ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಹಾಗೂ ನಮ್ಮ ಸಂಸ್ಥೆಯ ಚೇರಮನರಾದ ಶ್ರೀ ವಿ.ಸಿ.ಹಿರೇಮಠರು ಹಾಗೂ ವೇದಿಕೆಯ ಗಣ್ಯರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರವನ್ನು ಉದ್ಘಾಟಿಸಿದರು. ಶ್ರೀ ವಿ.ಸಿ.ಹಿರೇಮಠರು ಉದ್ಘಾಟನಾಪರ ನುಡಿಗಳನಾಡುತ್ತಾ, ಡಾ||ಪ್ರಭುಗೌಡ ಅವರು ಒಬ್ಬ ನೇತ್ರ ತಜ್ಞರು ಅಷ್ಟೇ ಅಲ್ಲ ಅವರೊಬ್ಬ ಬಹುದೊಡ್ಡ ದಾನಿ ಹಾಗೂ ಉತ್ತರ ಕರ್ನಾಟಕದ ಎಮ್.ಸಿ.ಮೋದಿ ಎಂದು ಹೇಳಿದರು.
ಕಾರ್ಯಕ್ರಮದ ಅತಿಥಿಗಳಾದ ಡಾ||ಪ್ರಭುಗೌಡ ಬಿ,ಎಲ್ ನೇತ್ರ ತಜ್ಷರು ವಿಜಯಪುರ. “ಮದ್ರಾಸ್ ಕಣ್ಣಿನ ಸೋಂಕು ಹಾಗೂ ಕಣ್ಣಿನ ಸುರಕ್ಷತಾ ಜಾಗೃತಿ ವಿಷಯದ ಕುರಿತು ಮಾತನಾಡುತ್ತಾ ಸ್ವಾವಲಂಬಿ ಜೀವನಕ್ಕೆ ಕಣ್ಣು ಎಂಬ ಇಂದ್ರಿಯ ಅವಶ್ಯಕ, ನಾಟಿ ವೈದ್ಯ ಕಣ್ಣಿಗೆ ಅಪಾಯಕಾರಿ ಜಂಕ್ ಪುಡ್ ದೇಹಕ್ಕೆ ಅಪಾಯಕಾರಿ, ಮಿತ ಹಾಗೂ ಒಳ್ಳೆಯ ಆಹಾರ ಸೇವನೆ ಆರೊಗ್ಯದ ಸೂತ್ರವೆಂದು ಹೇಳುತ್ತಾ ನೇತ್ರಾದಾನ ಮಹಾದಾನ ಎಂದು ಆರೋಗ್ಯ & ಶಿಕ್ಷಣವನ್ನು ಕುರಿತು ಕವಿಶೈಲಿಯ ಮಾತುಗಳ ಮೂಲಕ ವಿದ್ಯಾರ್ಥಿಗಳಿಗೆ ಆರೋಗ್ಯ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿಗಳಾದ ಶ್ರೀ ಆರ್.ಸಿ.ಕತ್ತಿ. ನಿರ್ದೆಶಕರು ವೀ.ವಿ.ಸಂಘ ತಾಳಿಕೋಟಿ ಮಾತನಾಡುತ್ತಾ, ಮಾನವನ ಅತ್ಯಂತ ಸೂಕ್ಷö್ಮ ಅಂಗವಾದ ಕಣ್ಣಿನ ಸಂರಕ್ಷಣೆಗೆ ಪ್ರಾಚೀನ ಕಾಲದ ಋಷಿಮುನಿಗಳ ಪ್ರಕೃತಿ ನಿಯಮಗಳಿಗೆ ಅನುಸಾರವಾಗಿ ಬದುಕಬೇಕು ಹಾಗೂ ಕೆಮಿಕಲ್ ಮುಕ್ತ ಆಹಾರ ಸೇವಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಆರ್. ವಿ. ಜಾಲವಾದಿಯವರು ಕಣ್ಣು ನಮ್ಮ ದೇಹದ ಪ್ರಧಾನ ಅಂಗ, ಇಂದು ನಾವೆಲ್ಲರು ನೇತ್ರದಾನ ಸಂಕಲ್ಪ ಮಾಡೋಣ ಎಂದು ವಿದ್ಯಾರ್ಥಿಗಳಮನ ಒಲಿಸುವದರ ಜೊತೆಗೆ ಕಣ್ಣಿನ ಕಾಳಿಜಿ & ಆರೋಗ್ಯ ಕಾಳಜಿ ಕರಿತು ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾಗಿ ಶ್ರೀ ರಮೇಶ ಸಾಲಂಕಿ ನಿರ್ದೇಶಕರು, ವೀ ವಿ ಸಂಘ ತಾಳಿಕೋಟಿ, ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು ಹಾಗೂ ಎಲ್ಲಾ ಭೋಧಕ ಭೋಧಕೇತರ ಸಿಬ್ಬಂದಿ ಹಾಗೂ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರು.
ಎನ್.ಎಸ್.ಎಸ್ ಘಟಕ ೧ರ ಅಧಿಕಾರಿಗಳಾದ ಶ್ರೀ ರಮೇಶ ಜಾಧವ ಸ್ವಾಗತಿಸಿದರು, ಎನ್.ಎಸ್.ಎಸ್ ಘಟಕ ೨ರ ಅಧಿಕಾರಿಗಳಾದ ಡಾ|| ದೀಪಾ ಮಾಳಗಿ ಅತಿಥಿಗಳ ಪರಿಚಯ ಹಾಗೂ ವಂದನಾರ್ಪಣೆಯನ್ನು ನೇರವೆರಿಸಿದರು, ವಿದ್ಯಾರ್ಥಿನಿಯಾದ ತೇಜಶ್ವಿನಿ ಡಿಸಲೆ ಅವರು ನಿರೂಪಿಸಿದರು.
