ಉದಯವಾಹಿನಿ, ವಾಷಿಂಗ್ಟನ್ : ರಕ್ತದ ಕ್ಯಾನ್ಸರ್(ಲುಕೇಮಿಯಾ) ನಿಂದ ಬಳಲುತ್ತಿದ್ದ 10 ವರ್ಷದ ಹುಡುಗಿಯೊಬ್ಬಳು ಸಾಯುವುದಕ್ಕೂ ಮುನ್ನ ತನ್ನ ಬಾಲ್ಯದ ಗೆಳೆಯನನ್ನು ಮದುವೆಯಾಗಿದ್ದಾಳೆ.
ಅಮೆರಿಕದ ಎಮ್ಮಾ ಎಡ್ವರ್ಡ್ಸ್ ಕಳೆದ ವರ್ಷ ಏಪ್ರಿಲ್‌ನಲ್ಲಿ ‘ಅಕ್ಯುಟ್ ಲಿಂಫೋಬ್ಲಾಸ್ಟಿಕ್ ಲುಕೇಮಿಯಾ’ಕ್ಕೆ ತುತ್ತಾಗಿದ್ದಳು.
ಇದೊಂದು ಗುಣಪಡಿಸಲಾಗದ ಕಾಯಿಲೆಯಾಗಿದೆ. ಮಗಳ ಸ್ಥಿತಿ ಕಂಡು ಚಿಂತಾಜನಕರಾದ ಪೋಷಕರು ಆಕೆಯ ಕೊನೆ ಆಸೆ ಪೂರೈಸಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
‘ಎಲ್ಲ ರೀತಿಯ ಚಿಕಿತ್ಸೆ ಕೊಡಿಸಿದ್ದೇವೆ. ಆದರೆ ಯಾವ ಚಿಕಿತ್ಸೆಯಿಂದಲೂ ಮಗಳ ಕಾಯಿಲೆ ವಾಸಿಯಾಗಲಿಲ್ಲ. ಒಂದು ವಾರ ಅಥವಾ ಅದಕ್ಕೂ ಮೊದಲು ಪ್ರಾಣ ಹೋಗಬಹುದೆಂದು ವೈದ್ಯರು ಹೇಳಿದ್ದರು. ವಿಷಯ ಕೇಳಿ ನಮಗೆ ದಿಕ್ಕು ತೋಚದಂತಾಗಿತ್ತು. ಅದ್ದೂರಿಯಾಗಿ ಮದುವೆಯಾಗಬೇಕೆಂಬುವುದು ಅವಳ ಕನಸಾಗಿತ್ತು. ಅದನ್ನು ನೆರವೆರಿಸಿದ್ದೇವೆ’ ಎಂದು ಎಮ್ಮಾ ತಾಯಿ ಅಲೀನಾ ‘ಕೆನಡಿ ನ್ಯೂಸ್’ ಪತ್ರಿಕೆಗೆ ತಿಳಿಸಿದ್ದಾರೆ.
