ಉದಯವಾಹಿನಿ  ತಾಳಿಕೋಟೆ: ತಾಲೂಕಿನ ಮೂಕಿಹಾಳ ಗ್ರಾಮ ಪಂಚಾಯತನ ನೂತನ ಅಧ್ಯಕ್ಷರಾಗಿ ರೇವಣೆಪ್ಪ ಹಣಮಪ್ಪ ಮೇಟಿ, ಉಪಾಧ್ಯಕ್ಷರಾಗಿ ಭೋರಮ್ಮ ನಾನಾಗೌಡ ದೇಸಾಯಿ ಆಯ್ಕೆಯಾದರು ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ರೇವಣೆಪ್ಪ ಮೇಟಿ ಹಾಗೂ ಬಾಬುಪಟೇಲ ಗುಡ್ನಾಳ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ನಡೆದಾಗ ರೇವಣೆಪ್ಪ ಮೇಟಿ ಅವರಿಗೆ ೧೩ ಹಾಗೂ ಬಾಬುಪಟೇಲ ಗುಡ್ನಾಳ ಅವರಿಗೆ ೭ ಮತಗಳು ಲಭಿಸಿದ್ದರಿಂದ ರೇವಣೆಪ್ಪ ಮೇಟಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾದ್ಯಕ್ಷ ಸ್ಥಾನಕ್ಕೆ ಬೋರಮ್ಮ ನಾನಾಗೌಡ ದೇಸಾಯಿ ಮತ್ತು ಭೀಮಪ್ಪ ಹಣಮಪ್ಪ ವಗ್ಗರ ನಾಮಪತ್ರ ಸಲ್ಲಿಸಿದರು .ಭೋರಮ್ಮ ದೇಸಾಯಿ ಅವರಿಗೆ ೧೨ ಹಾಗೂ ಭೀಮಪ್ಪ ಅವರಿಗೆ ೮ ಮತಗಳು ಲಭಿಸಿದ್ದರಿಂದ ಭೋರಮ್ಮ ದೇಸಾಯಿ ಉಪಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆಂದು ಚುನಾವನಾಧಿಕಾರಿ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಘೋಷಿಸಿದರು. ಚುನಾವಣಾ ಸಹಾಯಕರಾಗಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಸ್.ವಾಯ್.ತಳವಾರ ಕಾರ್ಯನಿರ್ವಹಿಸಿದರು. ಒಟ್ಟು ೨೦ ಜನ ಸದಸ್ಯರ ಬಲಹೊಂದಿದ್ದು ಎಲ್ಲ ಸದಸ್ಯರು ಹಾಜರಿದ್ಗದರು.
ವಿಜಯೋತ್ಸವ :- ಮಾಜಿ ಜಿಲ್ಲಾ ಪಂಚಾಯತ ಸದಸ್ಯ ನಿಂಗಪಗೌಡ ಬಪ್ಪರಗಿ ಅವರ ನೇತೃತ್ವದಲ್ಲಿ ಆಯ್ಕೆಗೊಂಡು ನೂತನ ಅಧ್ಯಕ್ಷ ರೇವಣೆಪ್ಪ ಮೇಟಿ ಮತ್ತು ಉಪಾಧ್ಯಕ್ಷ ಭೋರಮ್ಮ ದೇಸಾಯಿ ಅವರು ಬೆಂಬಲಿಗರೊ0ದಿಗೆ ಗುಲಾಲ್ ಎರಚಿ, ಪಟಾಕಿ,ಸಿಡಿಸಿ,ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿಂಗಪ್ಪಗೌಡ ಅವರು ಪಕ್ಷಾತೀತವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಮಾಡಲಾಗಿದೆ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ದಿ ಮಾಡಲು ಸಹಕಾರ ನೀಡಲಾಗುವದು ಎಂದರು.
ಈ ಸಮಯದಲ್ಲಿ ಪಂಚಾಯತ ಸದಸ್ಯರುಗಳಾದ ಶ್ರೀಶೈಲ ಬಿರಾದಾರ, ಪರಶುರಾಮ ನಾಗೂರ, ಚಂದು ಶಿವಪ್ಪ ಪವಾರ, ಸೋಮನಿಂಗಪ್ಪ ಚಲವಾದಿ, ಸುಮಿತ್ರಾ ರಾಜಕುಮಾರ ತಳವಾರ, ದೇವಮ್ಮ ಕೂಡಲಗಿ, ಗಂಗವ್ವ ನಾಯ್ಕೋಡಿ, ದೇವಣ್ಣ ಪೂಜಾರಿ, ಮಾಳಪ್ಪ ಬಿರಾದಾರ, ಚಂದುಬಾಯಿ ರಾಠೋಡ, ಸಾಹೇಬಪಟೇಲ ಮೊಕಾಶಿ, ಈರಣ್ಣ ಹೊಕ್ರಾಣಿ, ನಿಂಗಪ್ಪ ನಾಗೂರ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!