ಉದಯವಾಹಿನಿ  ತಾಳಿಕೋಟಿ :ನಾಡಿನ ಖ್ಯಾತ ನೇತೃ ತಜ್ಞ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾಕ್ಟರ್ ಪ್ರಭುಗೌಡ ಲಿಂಗದಳ್ಳಿ  ಇವರಿಗೆ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಯಾದ  ಶ್ರೀ  ಖಾಸಗತೇಶ್ವರ ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಿ ಗೌರವಿ ಸಲಾಯಿತು. ಇತ್ತೀಚಿಗೆ ಎಸ್ ಕೆ ಮಹಾವಿದ್ಯಾಲಯ ತಾಳಿಕೋಟೆಯಲ್ಲಿ ಹಮ್ಮಿಕೊಂಡ ಕಣ್ಣಿನ ಸುರಕ್ಷತಾ ಜಾಗೃತ ಶಿಬಿರದಲ್ಲಿ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಈ  ಗೌರವ ನೀಡಿ ಸನ್ಮಾನಿಸಲಾಯಿತು. 2001ರಲ್ಲಿ ಅನುಗ್ರ ಹೆಸರಿನಲ್ಲಿ ಚಿಕಿತ್ಸಾಲಯ ಪ್ರಾರಂಭಿಸಿದ ಡಾಕ್ಟರ್ ಪ್ರಭುಗೌಡರು ಇಲ್ಲಿಯವರೆಗೆ ಸುಮಾರು1. 5 ಲಕ್ಷಕ್ಕೂ ಹೆಚ್ಚು ಉಚಿತ ನೇತ್ರ  ಚಿಕಿತ್ಸೆಯನ್ನು ಹಾಗೂ ಸುಮಾರು 30 ಸಾವಿರಕ್ಕೂ ಹೆಚ್ಚು ಉಚಿತ ನೇತ್ರ ಶಸ್ತ್ರ ಚಿಕಿತ್ಸೆಯನ್ನು ಮಾಡಿ ತಮ್ಮ ಸಾಮಾಜಿಕ ಬದ್ಧತೆಯನ್ನು ತೋರಿದ್ದಾರೆ ರಾಷ್ಟ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದಾರೆ ಅವರ ಈ ಅಮೂಲ್ಯ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ
 ಸನ್ಮಾನ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ವಿಸಿ ಹಿರೇಮಠ್ ಪ್ರಾಚಾರ್ಯ ಆರ್ ವಿ ಜಲವಾದ್ ನಿರ್ದೇಶಕರು ರಮೇಶ್ ಸಾಲಂಕಿ ಎಸ್ ಎಸ್ ಎಸ್ ಘಟಕ ಅಧಿಕಾರಿ ರಮೇಶ್ ಜಾದವ್ ಡಾಕ್ಟರ್ ದೀಪ ಮಾಳಗಿ ತೇಜಸ್ವಿನಿ ಡಿಸ್ಲೆ  ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!