ಉದಯವಾಹಿನಿ, ದೇವದುರ್ಗ : ಕೆಲಸಕ್ಕೆ ಅರ್ಜಿ ಸಲ್ಲಿಸಿದ ಕೂಲಿಕಾರರಿಗೆ ಕೆಲಸ ನೀಡುವಲ್ಲಿ ವಿಳಂಬ ಖಂಡಿಸಿ ಬುಧುವಾರ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ನೇತೃತ್ವದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದರು. ಮೇಟ್ ಗಳು ಕೆಲಸಕ್ಕೆ ಅರ್ಜಿ ಸಲ್ಲಿಸಿ 20-25ದಿನಗಳು ಸೆಳೆದಿವೆ.ಇಂದಿಗೂ ಕಾರಣಗಳು ಹೇಳುತ್ತಾ ಕೆಲಸ ನೀಡದೆ ವಿಳಂಬ ಮಾಡಲಾಗುತ್ತಿದೆ. ಸಂಭಂದಪಟ್ಟ ಯೋಜನಾ ಅನುಷ್ಠಾನ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ತಕ್ಷಣ ಕೆಲಸ ನೀಡಲು ಕ್ರಮವಹಿಸಬೇಕು. ಅಲ್ಲದೇ ಈಗಾಗಲೇ ಉದ್ಯೋಗ ಖಾತ್ರಿ ಅಡಿ ಕೆಲಸ ಮಾಡಿ ಮುಗಿಸಿರುವ ನಮ್ಮ ಸಂಘಟನೆಯ ಕೆಲವು ಕೂಲಿಕಾರರಿಗೆ ಕೂಲಿ ಹಣ ಪಾವತಿಸದೇ “0
” ಸೇವ್ ಮಾಡಲಾಗಿದ್ದು, ಕೆಲವು ಗುಂಪುಗಳಿಗೆ ಒಂದು ಕೂಲಿ ನಮ್ಮ ಗುಂಪುಗಳಿಗೆ ಒಂದು ಕೂಲಿ ಪಾವತಿ ಮಾಡುವ ಮೂಲಕ ತಾಂತ್ರಿಕ ಸಹಾಯಕ ಅನಂತ ರೆಡ್ಡಿ ತಾರತಮ್ಯ ಮಾಡಿದ್ದಾರೆ. ತಕ್ಷಣ ಅವರ ಮೇಲೆ ಸೂಕ್ತ ಕ್ರಮಕ್ಕೆ ಮೇಲಾ ಅಧಿಕಾರಿಗಳಿಗೆ ಶಿಪಾರಸ್ಸು ಮಾಡಬೇಕು. ಹಾಗೂ ಗ್ರಾಮ ಪಂಚಾಯತಿಯಲ್ಲಿಯೇ ಪಂಚಾಯತಿ ಆಪರೇಟರ್ ಕೆಲಸ ಮಾಡಬೇಕು ನಮ್ಮ ಎಲ್ಲಾ ಮೇಟ್ ಗಳಿಗೆ ಪಂಚಾಯತಿಯಲ್ಲಿ ಡಿಮ್ಯಾಂಡ್ ಕಾಪಿ ತೇಗೆದು ಕೊಡಬೇಕು ಎಂದು ಅನೇಕ ಬಾರಿ ಆಡಳಿತ ಮಂಡಳಿ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ.ಕಂಪ್ಯೂಟರ್ ಆಪರೇಟರ್ ಗಂಭೀರವಾಗಿ ಪರಿಗಣಿಸುತ್ತಿಲ್ಲ ಈ ಬಗ್ಗೆ ಅವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಯಲ್ಲಪ್ಪ ಗಚ್ಚಿನಮನಿ, ಸುರೇಶ್ ಗೌಡ, ಅಯ್ಯಣ್ಣ ಮಡಿವಾಳ, ಶಾಂತಕುಮಾರ್, ಆನಂದ ಚಲುವಾದಿ, ನಾಗರಾಜ,ಶಿವರಾಜ್, ಬಸ್ಸಪ್ಪ ತವಗ,ನರೇಶ್, ಹುಸೇನ್ ನಶಿ ಇದ್ದರು
