
ಉದಯವಾಹಿನಿ ಹೊಳಲ್ಕೆರೆ : ತಾಲ್ಲೂಕು ಚಿತ್ರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹನುಮನ ಕಟ್ಟೆ ಗ್ರಾಮದಲ್ಲಿ ದಿನಾಂಕ 9ನೇ ಆಗಸ್ಟ್ 2023ರ ಇಂದು ರಾಷ್ಟ್ರೀಯ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಗ್ರಾಮ ಸುಮಾರು ನೂರಕ್ಕೂ ಹೆಚ್ಚು ಫಲಾನುಭವಿಗಳ ಮನೆಗಳಿಗೆ ನಲ್ಲಿ ಅಳವಡಿಸುವ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಸದಸ್ಯರಾದ ಸುನೀತಾ ಕೆಂಚವಿರಪ್ಪ ಇಂದು ಚಾಲನೆ ನೀಡಿದರು.ಈ ಸಂಧರ್ಭದಲ್ಲಿ ಗ್ರಾಮದ ಮುಖಂಡರಾದ ವೆಂಕಟೇಶ್, ಶ್ರೀಧರಪ್ಪ ಮುತ್ತುರಾಜ್ ತಿಮ್ಮಪ್ಪ ಲೊಕೇಶಾಚಾರಿ ಮೂರ್ತಿ ಉಪನ್ಯಾಸಕ ಕೆಂಚವೀರಪ್ಪ ಹಾಗೂ ವೆಂಕಟೇಶ್ ಹಾಜರಿದ್ದರು.
