
ಉದಯವಾಹಿನಿ ಕುಶಾಲನಗರ:-ಕುಶಾಲನಗರ ತಾಲೂಕಿನ ಕೂಡು ಮಂಗಳೂರು ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ 2ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಭಾಸ್ಕರ ನಾಯಕ್ ಅಧ್ಯಕ್ಷರಾಗಿ ಹಾಗೂ ಶಶಿಕಲಾ ಉಪಾಧ್ಯಕ್ಷರಾಗಿ ಆಯ್ಕೆಯಾದರು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಚಂದ್ರಶೇಖರ್ ನಾಮಪತ್ರ ಹಿಂಪಡೆದಿದ್ದರಿಂದ ಇಬ್ಬರ ನಡುವೆ ನಡೆದ ಸ್ಪರ್ಧೆಯಲ್ಲಿ ಭಾಸ್ಕರ್ ನಾಯಕ್ 18 ಮತ ಶಂಸುದ್ದೀನ್ ಗೆ 6 ಮತಗಳು ಲಭಿಸಿದವು.
ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಶಿಕಲಾ ಅವರಿಗೆ 13 ಮತಗಳು ಆಶಾ ಅವರಿಗೆ 11 ಮತಗಳು ಲಭಿಸಿದವು. ಕುಶಾಲನಗರದ ಪುರಸಭೆಯ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ಕೂಡಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಚುನಾವಣಾ ಪ್ರಕ್ರಿಯೆ ನಡೆಸಿದರು ಸದಸ್ಯರಾದ ಕೆಕೆ ಬೋಗಪ್ಪ ಶಿವಮ್ಮ ಶಶಿಕಲಾ ದೀಪ ಈರಯ್ಯ ಗಿರೀಶ್ ಜ್ಯೋತಿ ಹರೀಶ್ ಚೈತ್ರ ಮಂಜು ಭಾಗ್ಯ ಖತೀಜ ಪಾರ್ವತಮ್ಮ ದಿನೇಶ್ ಗೌರಮ್ಮ ಇಂದಿರಾ ಫಿಲೋಮಿನಾ ಚಂದ್ರಶೇಖರ್ ಲಕ್ಷ್ಮಿ ಮಣಿಕಂಠ ಸುರೇಶ್ ಮತದಾನದಲ್ಲಿ ಪಾಲ್ಗೊಂಡಿದ್ದರು
