ಉದಯವಾಹಿನಿ, ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಬ್ಯಾಟ್ಸ್‌ಮನ್‌ ರಿಂಕು ಸಿಂಗ್‌ ಅವರು ವಿಧಿವಶರಾದ ತಮ್ಮ ಪ್ರೀತಿಯ ತಂದೆಗೆ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ. ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆದಿದ್ದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ತಂಡ 96 ರನ್‌ಗಳಿಂದ ಗೆದ್ದು ಬೀಗಿತ್ತು ಹಾಗೂ ಮೂರನೇ ಬಾರಿ ಚುಟುಕು ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತ್ತು. ಇದೀಗ ಭಾರತ ತಂಡದಿಂದ ಮನೆಗೆ ಮರಳಿದ ತಕ್ಷಣ ರಿಂಕು ಸಿಂಗ್‌ ಕಳೆದ ತಿಂಗಳು ಕೊನೆಯುಸಿರೆಳೆದಿದ್ದ ತಂದೆಯನ್ನು ನೆನೆದು ಭಾವುಕರಾದರು.

Leave a Reply

Your email address will not be published. Required fields are marked *

error: Content is protected !!