
ಉದಯವಾಹಿನಿ ಯಾದಗಿರಿ: ವಡಗೇರಾ / ಶಹಾಪುರ ತಾಲೂಕಿನ ಕ್ರೀಡಾಂಗಣದಲ್ಲಿ ಹಯ್ಯಾಳ (ಬಿ) ಹೋಬಳಿ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು.ಈ ಕ್ರೀಡಾ ಕೂಟದಲ್ಲಿ ಕಾಡಂಗೇರಾ(ಬಿ) ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಮಕ್ಕಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ವೈಯಕ್ತಿಕ ಕ್ರೀಡೆಯಲ್ಲಿ ಬಾಲಕರ 600 ಮೀಟರ್ ಓಟದಲ್ಲಿ ದೇವರಾಜ ಹಾಗೂ ಬಾಲಕಿಯರ ವಿಭಾಗದಲ್ಲಿ 600 ಮೀಟರ್ ಓಟದಲ್ಲಿ ಭಾಗ್ಯಲಕ್ಷ್ಮಿ , 400 ಮೀಟರ್ ಓಟದಲ್ಲಿ ಐಶ್ವರ್ಯ, 100 ಮೀಟರ್ ಓಟದಲ್ಲಿ ಶರಣಮ್ಮ ಪ್ರಥಮ ಸ್ಥಾನ ಗಳಿಸಿದ್ದಾರೆ. ಮತ್ತು ಸಾಮೂಹಿಕ ಕ್ರೀಡೆಯಲ್ಲಿ ಬಾಲಕಿಯರ ಗುಂಪು ಆಟದಲ್ಲಿ ಖೋಖೋ, ಕಬ್ಬಡ್ಡಿ, ಥ್ರೋ ಬಾಲ್ ಮತ್ತು ಬಾಲಕರ ಗುಂಪು ಆಟದಲ್ಲಿ ವಾಲಿಬಾಲ್ ನಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಶಾಲೆಯ ಮುಖ್ಯ ಗುರುಗಳಾದ ಅಯೂಬ್ ಜಮಾದಾರ್ ಹಾಗೂ ಸಹ ಶಿಕ್ಷಕರು, ಊರಿನ ಗ್ರಾಮಸ್ಥರು ಹರ್ಷವ್ಯಕ್ತ ಪಡಿಸಿದ್ದಾರೆ
