
ಉದಯವಾಹಿನಿ ಕೋಲಾರ :- ತಾಲೂಕಿನ ವೇಮಗಲ್ ಹೋಬಳಿಯ ಚನ್ನಸಂದ್ರ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಮಾಜಿ ಸಚಿವ ಆರ್ ವರ್ತೂರ್ ಪ್ರಕಾಶ್ ಬಣದ ಮುಖಂಡರು ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿಗಳಾದ ದೀಪಾ ಎಸ್ ರಾಮೇಗೌಡ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ರವಿ ಜಯಶೀಲರಾದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ದೀಪ ಎಸ್ ರಾಮೇಗೌಡ ಮಾತನಾಡಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಯಶಸ್ವಿಯಾಗಿ ಅಧಿಕಾರಕ್ಕೆ ಬರಲಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯ ಮಟ್ಟದಿಂದ ಸಂಸತ್ ಸದಸ್ಯರ ಸ್ಥಾನದವರೆಗೂ ಮೈತ್ರಿ ಮಾಡಿಕೊಂಡರೆ ನಾವು ಯಶಸ್ವಿಯಾಗುತ್ತೇವೆ ಎಂಬುದು ನಮ್ಮ ಅಭಿಪ್ರಾಯವಾಗಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಮೈತ್ರಿ ಮಾಡಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿ ಅಧಿಕಾರ ಪಡೆಯಲು ಪ್ರಯತ್ನಿಸಲಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಾಲೂಕಿನಲ್ಲಿ ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಎಂಎಲ್ಸಿ ಇದ್ದರು ಕೂಡ ಯಾವುದೇ ರೀತಿಯ ಅಧಿಕಾರದ ಆಸೆಗೆ ನಮ್ಮ ಬಿಜೆಪಿ ಮತ್ತು ಜೆಡಿಎಸ್ ಗ್ರಾಮ ಪಂಚಾಯಿತಿ ಸದಸ್ಯರು ಒಳಗಾಗದೆ ಪಕ್ಷದ ನಿಷ್ಠೆಯಿಂದ ಮತ ಚಲಾಯಿಸಿ ನನ್ನನ್ನ ಗೆಲ್ಲಿಸಿದ್ದಾರೆ ನಾನು ಯಾವುದೇ ಕಾರಣಕ್ಕೂ ಪಕ್ಷ ಬೇದ ನೋಡುವುದಿಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಹೊಂದಬೇಕು ಗ್ರಾಮಗಳು ಅಭಿವೃದ್ಧಿ ಹೊಂದಬೇಕು ಇದರ ನಿಟ್ಟಿನಲ್ಲಿ ನಾನು ಕೆಲಸ ನಿಭಾಯಿಸುತ್ತೇನೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕಡಗಟ್ಟೂರು ದೇವರಾಜ್ ಮಾತನಾಡಿ ಚನ್ನಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಗೆ ಜೆಡಿಎಸ್ ಗ್ರಾಮ ಪಂಚಾಯಿತಿ ಸದಸ್ಯರು ಬೆಂಬಲ ನೀಡಿದ್ದರಿಂದ ಗೆಲುವು ಸುಲಭವಾಗಿತ್ತು ಇದೇ ರೀತಿ ಮುಂದೆ ನಡೆಯಲಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಇದೇ ರೀತಿ ಹೋಗುವುದರಿಂದ ಕಾಂಗ್ರೆಸ್ ಪಕ್ಷವನ್ನು ಮಣಿಸಬಹುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್, ರಾಧಮ್ಮ ನಾಗೇಶ್, ಬಿ ರಮೇಶ್, ಶೇಖರ್, ಪದ್ಮಮ್ಮ, ಸುರೇಶ್, ಮುಖಂಡರಾದ ಕೋಲಾರ ತಾಲೂಕು ಬಿಜೆಪಿ ಪಕ್ಷದ ಅಧ್ಯಕ್ಷರಾದ ಸಿ.ಡಿ.ರಾಮಚಂದ್ರಗೌಡ ಜೆಡಿಎಸ್ ಮುಖಂಡ ಕಡಗಟ್ಟೂರು ವಿಜಯ್ ಕುಮಾರ್, ಮಾಜಿ ಅಧ್ಯಕ್ಷರಾದ ಭವ್ಯಶ್ರೀ ಮುರಳಿ, ರಮೇಶ್, ಚನ್ನಕೃಷ್ಣೇಗೌಡ, ಕುರುಗಲ್ ಮಲ್ಲೇಶ್, ಬಿಚ್ಕೊಂಡಹಳ್ಳಿ ದಿಲೀಪ್, ಪಿಳ್ಳಪ್ಪ, ದಾಸಪ್ಪ, ರಮೇಶ್ ಸಿಎನ್, ವೆಂಕಟಪ್ಪ, ಬೈರಂಡಹಳ್ಳಿ ನವೀನ್ ಹಾಗೂ ಉಪಸ್ಥಿತರಿದ್ದರು.
