ಉದಯವಾಹಿನಿ ಸಿಂಧನೂರು :- ಪ್ರತಿಯೊಂದು ಗುಂಪಿನಲ್ಲಿ ಒಂದೊಂದು ರೀತಿಯ ಕೌಶಲ್ಯಗಳ ತರಬೇತಿಯನ್ನು ಪಡೆದು ನೀವೇ ಉದ್ಯೋಗ ನೀಡವಂತರಾಗಿ ಎಂದು ಹೇಳಿದರು ಸಂಜೀವಿನ ಒಕ್ಕೂಟದ ಸಿಬ್ಬಂದಿಗಳಿಗೆ ಮಾಸಿಕೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಾ ಒಕ್ಕೂಟಗಳ ಮಾಹಿತಿ ಪಡೆದುಕೊಂಡುರು.ಕಸ ವಿಲೇವಾರಿಯ ಕಾರ್ಯಗಳು ಮತ್ತು ಸ್ವಚ್ಛತೆಯ ಬಗ್ಗೆ ನೀವೆಲ್ಲಾ ಜಾಗೃತಿ ಮೂಡಿಸಿ ಎಂದು ಎಲ್ಲಾ ಒಕ್ಕೂಟದ ಸಿಬ್ಬಂದಿಗಳಿಗೆ ತಿಳಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಎ.ಡಿ. ಅಮರಗುಂಡಪ್ಪ ಅವರ ಮಾತನಾಡಿ ಸಂಜೀವಿನಿ ಮಹಿಳೆಯರು ಕಸ ವಿಲೇವಾರಿ ಮತ್ತು ಮಹಿಳಾ ಡ್ರೈವರ್ ಗಳ ಮಾಹಿತಿ ಪಡೆದುಕೊಂಡರು ಮುಂದಿನ ದಿನಗಳಲ್ಲಿ ಸಂಪೂರ್ಣ ಸ್ವಚ್ಛತೆಯ ಗ್ರಾಮಗಳನ್ನಾಗಿ ಮಾಡಲು ತಾವೆಲ್ಲರೂ ಶ್ರಮ ಪಡಬೇಕು ನಿಮಗೆಲ್ಲ ಸಹಕಾರ ಸದಾ ನಾವೆಲ್ಲಾ ನೀಡುತ್ತೇವೆ ಎಂದರು ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಸಹಾಯಕಿ ಶಾರದಾ ತಾಲೂಕು ಎನ್ ಆರ್ ಎಲ್ ಎಂ ಘಟಕದ ವ್ಯವಸ್ಥಾಪಕ ವೀರಭದ್ರಗೌಡ ಗಚ್ಚಿನ ಮನಿ ಶ್ರೀ ಕಾಂತ ರೆಡ್ಡಿ, ಸಲ್ಮ್ ಬೇಗಂ, ಮಹಾಂತೇಶ್ ಭೇರಗಿ. ಹಾಗೂ ಒಕ್ಕೂಟದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಗರದ ತಾಲ್ಲೂಕು ಪಂಚಾಯಿತ ಸಭಾಂಗಣದಲ್ಲಿ ನಡೆದ ಮಹಿಳೆಯರು ಗುಂಪಿನ ಕೌಶಲ್ಯ ತರಬೇತಿ ಕಾರ್ಯಕ್ರಮ ಕುರಿತು ಮಾತನಾಡಿದ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಅವರ ಪ್ರತಿಯೊಂದು ಗುಂಪಿನ ಮಹಿಳೆಯರು ಬೇರೆ ಬೇರೆ ರೀತಿಯ ಕೌಶಲ್ಯಗಳ ತರಬೇತಿ ಪಡೆದು ಅದರ ಸವಲತ್ತುಗಳನ್ನು ಪಡೆದುಕೊಂಡು ನೀವೇ ಉದ್ಯೋಗ ನೀಡುವಂತರಾಗಿ ಎಂದರು .

Leave a Reply

Your email address will not be published. Required fields are marked *

error: Content is protected !!