ಉದಯವಾಹಿನಿ, ವೈಲುಕು
: ಅಮೆರಿಕದ ದ್ವೀಪರಾಜ್ಯವಾದ ಹವಾಯಿಯ ಮೌಯಿಯಲ್ಲಿ ಈಗಾಗಲೇ ಸಂಭವಿಸಿರುವ ಭೀಕರ ಕಾಡ್ಗಿಚ್ಚಿಗೆ ಜನರ ಆಸ್ತಿ-ಪಾಸ್ತಿಗಳಿಗೆ ಭಾರೀ ಹಾನಿ ಉಂಟು ಮಾಡಿದ್ದು, ಕನಿಷ್ಠ ೫೭ ಮಂದಿ ಸಾವನ್ನಪ್ಪಿದ್ದಾರೆ. ಪ್ರಸಕ್ತ ಸನ್ನಿವೇಶವನ್ನು ಹವಾಯಿಯ ಗವರ್ನರ್ ಜೋಶ್ ಗ್ರೀನ್ ಅವರು ಬಾಂಬ್ ಸ್ಫೋಟಕ್ಕೆ ಹೋಲಿಸಿದ್ದು, ಮುಂದೆ ಇಡೀ ನಗರವನ್ನೇ ನಿರ್ಮಿಸುವ ಅಗತ್ಯವಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ. ಅವಘಡ ಹಿನ್ನೆಲೆಯಲ್ಲಿ ಈಗಾಗಲೇ ಸಾವಿರಕ್ಕೂ ಅಧಿಕ ಮನೆಗಳಲ್ಲಿ ನೆಲೆಸಿರುವ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಹವಾಯಿಯ ಪ್ರಮುಖ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದೆಂದು ಗುರುತಿಸಿಕೊಂಡಿರುವ ಲಹೈನಾ ನಗರದಲ್ಲಿ ಹವಾಯಿ ದಕ್ಷಿಣ ಭಾಗದಿಂದ ಹಾದುಹೋದ ಪ್ರಬಲವಾದ ಡೋರಾ ಸುಂಟರಗಾಳಿಯಿಂದಾಗಿ ವೇಗವಾಗಿ ಹರಡಿದ ಕಾಡ್ಗಿಚ್ಚು ಹರಡಿದೆ. ಕಾಡ್ಗಿಚ್ಚಿನ ಪರಿಣಾಮ ಕಾರ್, ಮನೆಗಳು ಹಾಗೂ ಹಲವಾರು ಐತಿಹಾಸಿಕ ಕಟ್ಟಡಗಳು ಬೆಂಕಿಗಾಹುತಿಯಾಗಿವೆ. ಕಾಡ್ಗಿಚ್ಚಿನ ಭೀಕರ ಜ್ವಾಲೆಗಳು ರಾತ್ರಿಯಿಡೀ ತಾಂಡವವಾಡಿದ್ದು, ಮಕ್ಕಳು ಸೇರಿದಂತೆ ಹಲವಾರು ಮಂದಿ ಸುರಕ್ಷತೆಗಾಗಿ ಸಮುದ್ರಕ್ಕೆ ಜಿಗಿದಿದ್ದಾರೆ.
