ಉದಯವಾಹಿನಿ ಇಂಡಿ : ತಾಲೂಕಿನಲ್ಲಿ 76ನೇಯ ಸ್ವಾತಂತ್ರ್ಯೋತ್ಸವ ಸವಿನೆನಪಿಗಾಗಿ ನನ್ನ ದೇಶ ನನ್ನ ಮಣ್ಣು ಕಾರ್ಯಕ್ರಮವನ್ನು ನಗರದ ವಾರ್ಡ್ ನಂಬರ್ 12ರಲ್ಲಿ ಆಚರಣೆಗಳು ಮಾಡಲಾಯಿತು.ವಾರ್ಡ ನಾಗರೀಕರು ಹಾಗೂ ಮಾಜಿ ಸೈನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಮಾಜಿ ಸೈನಿಕ ಸಂಘದ ಅಧ್ಯಕ್ಷ ಕೆ ರಾಮಪ್ಪ ಮಾತನಾಡಿ ,ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ದೇಶ ಭಕ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ,ಅವರ ತ್ಯಾಗ ಬಲಿದಾನ ಅವಿಸ್ಮರಣೀಯ.ಎಂದು ಮಾತನಾಡಿದರು,ಇದೆ ಸಂದರ್ಭದಲ್ಲಿ ಪುರಸಭಾ ಸದಸ್ಯ ಸುದೀರ ಕರಕಟ್ಟಿ, ನೂತನ ಪುರಸಭಾ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಆರೋಗ್ಯ ಅಧಿಕಾರಿ ಸೋಮನಾಕ,ಮಾಜಿ ಸೈನಿಕರರಾದ,ಬಂಕೂರ, ಹಂಚಾಟೆ,ಬಿರಾದರ ಹಾಗೂ ವಾರ್ಡ್ ನಿವಾಸಿಗರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
