ಉದಯವಾಹಿನಿ ಇಂಡಿ :  ತಾಲೂಕಿನಲ್ಲಿ ದಿನಾಂಕ 12.08.2023 ರಂದು ಎಸ್.ಎಸ್.ವಿ.ವಿ.ಸಂಘದ ಶ್ರೀ ಜಿ.ಆರ್.ಗಾಂಧಿ ಕಲಾ, ಶ್ರೀ ವಾಯ್.ಎ.ಪಾಟೀಲ ವಾಣ ಜ್ಯ ಹಾಗೂ ಶ್ರೀ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯ ಇಂಡಿಯಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ ಭಾರತದ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದ ಪಿತಾಮಹರಾದ ಡಾ.ಎಸ್.ಆರ್.ರಂಗನಾಥನ್ ಅವರ 131ನೇ ಜಯಂತಿಯನ್ನು ‘ರಾಷ್ಟಿಯ ಗ್ರಂಥಾಪಾಲಕರ ದಿನಾಚರಣೆ’ಯನ್ನಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕರಾದ ಶ್ರೀ ರಾಘವೇಂದ್ರ ಇಂಗನಾಳ ರವರು ಮಾತನಾಡುತ್ತಾ ಗ್ರಂಥವಿಲ್ಲದ ಕೊಣೆ ಆತ್ಮವಿಲ್ಲದ ಶರೀರದಂತೆ ಹಾಗೂ ಗ್ರಂಥಾಲಯವಿಲ್ಲದ ಶಿಕ್ಷಣ ಸಂಸ್ಥೆ ಹೃದಯವಿಲ್ಲದ ಮಾನವನಂತೆ’ ಎಂದು ಹೇಳುತ್ತಾ ಗ್ರಂಥಾಲಯ ವಿಜ್ಞಾನದ ಪಂಚ ಸೂತ್ರಗಳನ್ನು ತಿಳಿಸುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರಸಕ್ತ ಸ್ಪಾರ್ಧಾತ್ಮಕ ಜೀವನದಲ್ಲಿ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಎಸ್.ಬಿ.ಜಾಧವರವರು ಮಾತನಾಡುತ್ತ ‘ಗ್ರಂಥಾಲಯ ಅರಿವಿನ ಜ್ಞಾನದೀವಿಗೆಗಳು ಇಷ್ಟಪಟ್ಟು ಓದಲು ಬರುವವರೆಗೆ ಗ್ರಂಥಾಲಯಗಳು ಜ್ಞಾನದ ಹೊಸ ಹೊಳಹನ್ನು ನೀಡುವ ಅಕ್ಷಯ ಭಂಡಾರಗಳಾಗಿವೆ’ ಗ್ರಂಥ ನಮಗೆ ತ್ರಿವಿಧ ಜ್ಞಾನವನ್ನು ಒದಗಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಇದರ ಮಹತ್ವವನ್ನು ಅರಿತು ತಮ್ಮ ಜ್ಞಾನವೃದ್ಧಿಸಕೊಳ್ಳಬೇಕೆಂದು ತೀಳಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ಆನಂದ ನಡವಿನಮನಿ, ಡಾ. ವಿಶ್ವಾಸ. ಕೋರವಾರ, ಡಾ. ಪಿ.ಕೆ.ರಾಠೋಡ, ಡಾ.ಸುರೇಂದ್ರ ಕೆ, .ಶ್ರೀಶೈಲ,  ಡಾ. ಸಿ.ಎಸ್.ಬಿರಾದಾರ, ಡಾ. ಜಯಪ್ರಸಾದ್ ಡಿ, ಡಾ. ಶ್ರೀಕಾಂತ ರಾಠೋಡ, ಶ್ರೀ ಎಮ್.ಆರ್ ಕೋಣದೆ, ಅತಿಥಿ ಉಪನ್ಯಾಸಕರು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!