
ಉದಯವಾಹಿನಿ ಮುದ್ದೇಬಿಹಾಳ ; ಕಾಲುವೆಗಳ ಅಕ್ಕಪಕ್ಕದ ರೈತರು ತಮ್ಮ ಹೊಲಗಳಿಗೆ ನೀರು ಹರಿಸಿಕೂಳ್ಳಲು ಕಾಲುವೆಗೆ ದಕ್ಕೆಯಾಗದಂತೆ ನೀರು ಹಾಯಿಸಿಕೂಳ್ಳಬೇಕೆಂದು ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ಹೇಳಿದರು . ಶುಕ್ರವಾರ ಮುದ್ದೇಬಿಹಾಳ ತಾಲ್ಲೂಕಿನ ಹರಿಂದ್ರಾಳ ಬಳಿ ಒಡೆದಿದ್ದ ಕೃಷ್ಣಾ ಭಾಗ್ಯಜಲನಿಗಮದ ಕಾಲುವೆ ಸ್ಥಳಕ್ಕೆ ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ಭೇಟಿಯನ್ನು ನೀಡಿ ಪರಿಶೀಲಿಸಿದರು ಎಂಬ್ಯಾಕ್ ಮೆಂಟ್ ಕಾಲುವೆಗಳಿಗೆ ಪೈಪ್ ಹಾಕುವುದರಿಂದ ಕಾಲುವೆ ಒಡೆದು ಜಮೀನುಗಳಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಇದಕ್ಕೆ ಆಸ್ಪದ ನೀಡದಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ಶಾಸಕರು ನೀಡಿದರು ಕೃಷ್ಣ ಭಾಗ್ಯಜಲನಿಗಮದ ಇಇ ಆರ್ ಎಲ್ ಹಳ್ಳೂರ ಒಡೆದಿರುವ ಕಾಲುವೆ ದುರಸ್ತಿ ಈಗಾಗಲೇ ಮಾಡಲಾಗಿದ್ದು ಮೂರು ದಿನಗಳಲ್ಲಿ ಕಾಲುವಗೆ ನಿಧಾನಗತಿಯ ನೀರು ಹರಿಸುವಿಕೆ ಕಾರ್ಯ ಆರಂಭಿಸಲಾಗುತ್ತದೆ ,ರೈತರು ಮೋಟರ್ ಗಳನ್ನು ಕಾಲುವೆ ದಡದಲ್ಲಿ ಇಟ್ಟು ತಮ್ಮ ಜಮೀನಿಗೆ ನೀರು ಹಾರಿಸಿಕೊಂಡರೆ ಸಮಸ್ಯೆ ಇಲ್ಲ ಆದರೆ ಕಾಲುವೆ ಕೊರೆದು ಪೈಪ್ ಹಾಕುವುದರಿಂದ ಈ ರೀತಿಯ ಘಟನೆ ಸಂಭವಿಸುತ್ತದೆ ಎಂದು ಮಾಹಿತಿಯನ್ನು ನೀಡಿದ ಅವರು ಕಾಲುವೆಯ ನವೀಕರಣ ಕಾರ್ಯ ಮಳೆಗಾಲ ಮುಗಿದ ಮೇಲೆ ಆರಂಭವಾಗಲಿದೆ ಎಂದರು
ಈ ವೇಳೆ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಎಇ ಸುರೇಶ ತಳವಾರ ಉಪಸ್ಥಿತರಿದ್ದರು
