ಉದಯವಾಹಿನಿ ಸಿರುಗುಪ್ಪ : ನಗರದ ತಾಲೂಕು ಕ್ರೀಡಾಂಗಣದಲ್ಲಿ ೭೬ನೇ ಸ್ವಾತ್ಯಂತ್ರೋತ್ಸವದ ಅಂಗವಾಗಿ ನಗರ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಡಶಾಲೆಗಳ ಸಾಮಾನ್ಯ, ಸ್ಕೌಟ್ಸ್ ಅಂಡ್ ಗೈಡ್ಸ್, ಸೇವಾದಳದ ತಂಡಗಳ ಪೂರ್ವ ತಯಾರಿಯ ಪಥಸಂಚಲನ ನಡೆಯಿತು.
ಪ್ರಾಥಮಿಕ ಶಾಲೆಗಳ ಸಾಮಾನ್ಯ ತಂಡಗಳ ವಿಭಾಗದಲ್ಲಿ ೭,೮ನೇ ವಿಭಾಗ ಸರ್ಕಾರಿ ಶಾಲೆ, ಗಾಯತ್ರಿ ವಿದ್ಯಾಮಂದಿರ, ವಿವೇಕಾನಂದ, ಎಸ್.ಇ.ಎಸ್ ಕನ್ನಡ ಮತ್ತು ಆಂಗ್ಲ ಮಾದ್ಯಮ, ಶಾಂತಿನಿಕೇತನ ಕನ್ನಡ ಮತ್ತು ಆಂಗ್ಲ ಮಾದ್ಯಮ, ವಿಜಯಮೇರಿ ಕನ್ನಡ ಮತ್ತು ಆಂಗ್ಲ ಮಾದ್ಯಮ, ಶ್ರೀಕೃಷ್ಣ ದೇವರಾಯ, ಶ್ರೀಯಲ್ಲಮ್ಮ ದೇವಿ, ಜವಾಹರ್ ವಿದ್ಯಾಮಂದಿರ, ವಿಶ್ವೇಶರಯ್ಯ, ಎಸ್.ಇ.ಎಸ್ ಬಾಲಕಿಯರ ಹಾಗೂ ಕಿಡ್ಸ್ ಪ್ಯಾರಾಡೈಸ್ ಶಾಲೆಗಳ ಮಕ್ಕಳು ಪಾಲ್ಗೊಂಡಿದ್ದರು.
ಸೇವಾದಳ ವಿಭಾಗದಲ್ಲಿ ಪ್ರೌಡಶಾಲಾ ಆವರಣದ ಸರ್ಕಾರಿ ಶಾಲೆಯ ಸರ್ದಾರ್ ವಲಭಬಾಯ್ ಪಟೇಲ್, ೫ನೇವಿಭಾಗದ ಸರ್ಕಾರಿ ಶಾಲೆಯ ವಾದಿರಾಜ, ಶಾಂತಿನಿಕೇತನ ಶಾಲೆಯ ಶಿವಾಜಿ ದಳಗಳು ಹಾಗೂ ಸ್ಕೌಟ್ ಮತ್ತು ಮಾರ್ಗದರ್ಶಿ ತಂಡಗಳಲ್ಲಿ ಎಸ್.ಇ.ಎಸ್‌ನ ಗಂಗೂಬಾಯಿ ಹಾನಗಲ್, ಸಿ.ಎನ್.ಎನ್ ಆಂಗ್ಲ ಮಾದ್ಯಮ ಭಗತ್‌ಸಿಂಗ್, ವಿಜಯಮೇರಿಯ ಅಗ್ನೇಶ್ ಬೈಡನ್ ಪಾವಲ್ ತಂಡಗಳು ಭಾಗಿಯಾಗಿದ್ದವು.
ಪ್ರೌಡಶಾಲೆಯ ಸಾಮಾನ್ಯ ವಿಭಾಗದಲ್ಲಿ ಸರ್ಕಾರಿ ಬಾಲಕೀಯರ ಹಾಗೂ ಬಾಲಕರ, ಎಸ್.ಇ.ಎಸ್ ಆಂಗ್ಲ ಮಾದ್ಯಮ ಹಾಗೂ ಬಾಲಕೀಯರ, ಮೌಲಾನಾ ಅಬ್ದುಲ್ ಕಲಾಂ, ಸರ್ಕಾರಿ ಉರ್ದು, ರಾಜೀವ್ ಗಾಂದೀ, ವಿವೇಕಾನಂದ, ಸಿ.ಎನ್.ಎನ್. ೫ನೇ ವಿಭಾಗದ ಸರ್ಕಾರಿ ಪ್ರೌಡ ಶಾಲೆಗಳ ತಂಡಗಳು ಹಾಗೂ ಇನ್ನಿತರ ಸೇವಾದಳ, ಸ್ಕೌಟ್ ಮತ್ತು ಮಾರ್ಗದರ್ಶಿ ತಂಡಗಳು ಭಾಗವಹಿಸಿದ್ದವು.
ಇದೇ ವೇಳೆ ಗ್ರೇಡ್-೨ ದೈಹಿಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಈರಣ್ಣ, ಉಪೇಂದ್ರ, ಚೆನ್ನಪ್ಪ, ದಾನಪ್ಪ, ಯೋಗಿರಾಜ್, ವೈ.ಡಿ.ವೆಂಕಟೇಶ್, ಇನ್ನಿತರ ಶಾಲೆಗಳ ದೈಹಿಕ ಹಾಗೂ ಸಹಕ ಶಿಕ್ಷಕರು ಹಾಗೂ ಮಕ್ಕಳು ಇದ್ದರು.
