ಉದಯವಾಹಿನಿ ಸಿರುಗುಪ್ಪ : ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಹಿಂದಿರುವ ಸ.ಹಿ.ಪ್ರಾ.ಶಾಲೆ ಮತ್ತು ಸರ್ಕಾರಿ ಪ್ರೌಡ ಶಾಲೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಗರ‍್ರಪ್ಪ ಅವರು ಬಿಸಿಯೂಟ ಸವಿಯುವುದರೊಂದಿಗೆ ಪರಿಶೀಲಿಸಿದರು. ಸ.ಹಿ.ಪ್ರಾ.ಶಾಲೆಯಲ್ಲಿ ಸೂಕ್ತವಾಗಿ ಮುಚ್ಚದಿರುವ ಕುಡಿಯುವ ನೀರಿನ ಬಳಕೆ ಅವ್ಯವಸ್ಥೆ, ಸುರಕ್ಷತೆಯ ಉಡುಪುಗಳು ಹಾಗೂ ಕಿಟ್‌ಗಳನ್ನು ಧರಿಸದ ಅಡುಗೆ ಸಿಬ್ಬಂದಿಗಳನ್ನು ಹಾಗೂ ಬಿಸಿಯೂಟದಲ್ಲಿ ತರಕಾರಿಗಳನ್ನು ಬಳಸದಿರುವುದರಿಂದ ಶಾಲೆಯ ಪ್ರಭಾರಿ ಮುಖ್ಯೋಪಾದ್ಯಾಯಿನಿ ಛಾಯದೇವಿಯವರನ್ನು ತರಾಟೆಗೆ ತೆಗೆದುಕೊಂಡರು.
ಮಂದಿನ ದಿನಗಳಲ್ಲಿ ಈ ಅವ್ಯವಸ್ಥೆಯನ್ನು ಸರಿಪಡಿಸಿ ಇಲ್ಲವೇ ಬಿಸಿಯೂಟದ ಯೋಜನಾಧಿಕಾರಿಯವರಿಂದ ಜ್ಞಾಪಕ ಪತ್ರ ಕೊಡಿಸುವಂತೆ ಅಲ್ಲಿದ್ದ ಸಿ.ಆರ್.ಪಿ ಮಾರುತಿಯವರಿಗೆ ಸೂಚಿಸಿದರಲ್ಲದೇ ಇಂತಹ ಘಟನೆಗಳು ಮುಂದೆ ನಡೆಯದಂತೆ ಜಾಗೃತಿವಹಿಸುವಂತೆ ತಿಳಿಸಿದರು.
